ಪ್ರಿಯಾಂಕಾ ಶಾರುಖ್ ಕುಚಿಕು. ಗೌರಿ ನಿದ್ದೆ ಹಾಳು

By Mahesh

Shahrukh Khan, Priyanka affair
ವಿಶ್ವಸುಂದರಿ, ಬಾಲಿವುಡ್ ಬೆಡಗಿ ಪ್ರಿಯಾಂಕಾ ಛೋಪ್ರಾ ಹಾಗೂ ಕಿಂಗ್ ಖಾನ್ ಶಾರುಖ್ ಜೊತೆಗಿನ ಅತಿ ಆಪ್ತ ಗೆಳೆತನ ಗೌರಿ ಖಾನ್ ನಿದ್ದೆ ಕೆಡಿಸುತ್ತಿದೆ.

ಮೇಡಂ, ನಿಮ್ಮ ಹಾಗೂ ಶಾರುಖ್ ಗೆಳೆತನ ತುಂಬಾ ಮುಂದುವರೆದಿದೆಯಂತೆ ಹೌದಾ? ಎಂದು ಪ್ರಶ್ನೆ ಕೇಳಿದ ಪತ್ರಕರ್ತರ ಮೇಲೆ 'ಪಿಗ್ಗಿ' ಪ್ರಿಯಾಂಕಾ ಕೆಂಡಕಾರಿದ್ದಾಳೆ. ನಿಮ್ಜೊತೆ ಶಾರುಖ್ ಇದ್ರೆ ಬೇರೆ ಯಾರೂ ಡಿಸ್ಟರ್ಬ್ ಮಾಡೋಲ್ವಂತೆ ಹೌದಾ? ಅಂದಿದ್ದಕ್ಕೆ. ಹೋಗಿ ಅವರನ್ನೇ ಕೇಳಿ ಜಾಸ್ತಿ ಸ್ಮಾರ್ಟ್ ಆಗಿ ಪ್ರಶ್ನೆ ಕೇಳೋದು ಬಿಟ್ಟು ಬಿಡಿ ಎಂದು ಪ್ರಿಯಾಂಕಾ ಎಚ್ಚರಿಸಿದ್ದಾಳೆ.

ರಾ.ಒನ್ ಚಿತ್ರದ ಅಬ್ಬರದ ಪ್ರಚಾರದಲ್ಲಿ ಸಕತ್ ಬ್ಯುಸಿಯಾಗಿರುವ ಶಾರುಖ್ ಹಾಗೂ ಡಾನ್ 2 ಸಹ ನಟಿ ಪ್ರಿಯಾಂಕಾ ಜೊತೆ ಸಂಬಂಧ ಥಳಕು ಹಾಕಲು ಮಾಧ್ಯಮದವರಿಗೆ ಸಾಕಷ್ಟು ಪುರಾವೆಗಳು ಸಿಕ್ಕಿವೆ.

ಈದ್ ಪಾರ್ಟಿ ಮಾಡಿದ ಶಾರುಖ್ ತನ್ನ 'ಮನ್ನತ್' ಬಂಗಲೆಗೆ ಪ್ರಿಯಾಂಕಾಳನ್ನು ಕರೆದಿದ್ದ. ಆದರೆ, ಇದು ಪತ್ನಿ ಗೌರಿಗೆ ಇಷ್ಟವಿರಲಿಲ್ಲ. ಪಾರ್ಟಿಗೆ ಬಂದಿದ್ದ ಪ್ರಿಯಾಂಕಾಳನ್ನು ಸವತಿಯನ್ನು ಕಂಡಂತೆ ಕಂಡು ಕಡೆಗಾಣಿಸಲಾಗಿತ್ತು.

ಪ್ರಿಯಾಂಕಾ ಜೊತೆ ಹೃತಿಕ್ ಮಾತಾಡುತ್ತಿದ್ದರೂ, ಹೃತಿಕ್ ನನ್ನು ಪ್ರಿಯಾಂಕಾಳಿಂದ ದೂರು ಕರೆದೊಯ್ದ ಗೌರಿ, ಪ್ರಿಯಾಂಕಾಳ ಮೇಲೆ ಸರಿಯಾಗೇ ಸೇಡು ತೀರಿಸಿಕೊಂಡಿದ್ದಳು.
ನಂತರ ಶಾರುಖ್ ನನ್ನು ತರಾಟೆ ಕೊಂಡಿದ್ದಳು.

ಅದರೆ, ಮತ್ತೆ ಬಾಲ ಬಿಚ್ಚಿದ ಶಾರುಖ್, ಶೂಟಿಂಗ್, ಪಾರ್ಟಿ ಸೇರಿದಂತೆ ಎಲ್ಲೆಡೆ ಪ್ರಿಯಾಂಕಾ ಜೊತೆ ಅಂಟಿಕೊಂಡೇ ಇದ್ದ ಚಿತ್ರಗಳು ಆನ್ ಲೈನ್ ಗೆ ಬಂದ ಮೇಲೆ ಮತ್ತೆ ಹೊಗೆಯಾಡತೊಡಗಿದೆ. ಗೌರಿ ನಿದ್ದೆ ಗೆಡಿಸುತ್ತಿರುವ ಪ್ರಿಯಾಂಕಾ ಮಾತ್ರ ಏನು ಅರಿಯದಂತೆ ರಸಿಕ ಶಾರುಖ್ ಜೊತೆ ಲಲ್ಲೆಗೆರೆಯುತ್ತಿದ್ದಾಳೆ ಎಂದು ಬಾಲಿವುಡ್ ಮಂದಿ ಹೇಳುತ್ತಿದ್ದಾರೆ.

More from Filmibeat

English summary
Actress Priyanka recently lost her cool over question asked about affair with king khan Sharaukh. But Bollywood stars are having intimate moment with each other in many parties proof has been posted in net by Paparazzis.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X