ಗೃಹಸ್ಥಾಶ್ರಮ ಪ್ರವೇಶಿಸಿದ ತಾರೆ ಜೆನಿಲಿಯಾ ಡಿಸೋಜಾ
ಲವ್ಲಿ ಬೆಡಗಿ ಜೆನಿಲಿಯಾ ಡಿಸೋಜಾ ಶುಕ್ರವಾರ (ಫೆ.3) ಗೃಹಸ್ಥಾಶ್ರಮ ಪ್ರವೇಶಿಸಿದ್ದಾರೆ. ಮರಾಠಿ ಸಂಪ್ರದಾಯದಂತೆ ಮದುವೆ ನೆರವೇರಿತು. ಜೆನಿಲಿಯಾ ಬಾಳ ಸಂಗಾತಿಯಾಗಿ ರಿತೇಶ್ ದೇಶ್‌ಮುಖ್‍ಗೆ ಹೊಸ ಸಂಭ್ರಮ. ಇವರಿಬ್ಬರ ನಡುವಿನ ಎಂಟು ವರ್ಷಗಳ ಪ್ರೀತಿಗೆ ಮದುವೆ ಎಂಬ ಮುದ್ರೆ ಬಿದ್ದಿದೆ.
ಈ ಮದುವೆ ಸಂಭ್ರಮವನ್ನು ಕಣ್ಣು ತುಂಬಿಕೊಳ್ಳಲು ಬಾಲಿವುಡ್ ದಿಗ್ಗಜರು ಆಗಮಿಸಿದ್ದರು. ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಕಾಜೋಲ್, ಶಾರುಖ್ ಖಾನ್ ಸೇರಿದಂತೆ ಹಲವರು ಆಗಮಿಸಿದ್ದರು. ಮದುವೆಗೂ ಮುನ್ನ ರಿತೇಶ್ ಟ್ವೀಟಿಸಿದ್ದು ಹೀಗೆ, "Saw the Last sunset as a Bachelor."
ಇನ್ನೊಂದು ವಿಶೇಷ ಎಂದರೆ ಫೆಬ್ರವರಿಯಲ್ಲೇ ಇವರಿಬ್ಬರ ಅಭಿನಯದ Tere Naal Love Ho Gaya ಚಿತ್ರ ಬಿಡುಗಡೆ ಕಾಣುತ್ತಿರುವುದು. ರೊಮ್ಯಾಂಟಿಕ್ ಚಿತ್ರವಾದ ಲವ್ ಹೋ ಗಯಾ ಮೇಲೆ ಬಾಲಿವುಡ್‌ನಲ್ಲಿ ಬಹುನಿರೀಕ್ಷೆಗಳಿವೆ. (ಏಜೆನ್ಸೀಸ್)
More from Filmibeat
English summary
Actors Genelia D'souza and Riteish Deshmukh marriage held in traditional Marathi style, was attended by Bollywood biggies like Shah Rukh Khan, Abhishek Bachchan, Jaya Bachchan, Ajay Devgn and Kajol among others.


Click it and Unblock the Notifications











