ನಲವತ್ತೈದಕ್ಕೆ ಅಡಿಯಿಟ್ಟ ಬಾಲಿವುದ್ ಬಾದ್ ಶಾ
ಬಾಲಿವುಡ್ ಬಾದ್ ಶಾ, ಕಿಂಗ್ ಖಾನ್ ಶಾರುಖ್ ಖಾನ್‌ಗೆ ನಲವತ್ತೈದರ ಸಂಭ್ರಮ. ತಮ್ಮ ಹುಟ್ಟುಹಬ್ಬವನ್ನು(ನವೆಂಬರ್ 2) ಅವರು ಪತ್ನಿ ಗೌರಿ, ಮಕ್ಕಳಾದ ಆರ್ಯನ್, ಸುಸಾನಾ ಹಾಗೂ ನಟ ಹೃತಿಕ್ ರೋಶನ್ ಜೊತೆಗೆ ಆಚರಿಸಿಕೊಂಡು ಸಂಭ್ರಮಿಸಿದರು. 'ಡಾನ್ 2' ಚಿತ್ರದ ಚಿತ್ರೀಕರಣ ಬರ್ಲಿನ್‌ನಲ್ಲಿ ನಡೆಯುತ್ತಿದ್ದು ಶಾರುಖ್ ಅಲ್ಲೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಜಗತ್ತಿನಾದ್ಯಂತ ಇರುವ ತಮ್ಮ ಅಭಿಮಾನಿಗಳಿಗೆ ಶಾರುಖ್ ಧನ್ಯವಾದಗಳನ್ನು ತಿಳಿಸಿದ್ದಾರೆ. ಈ ಹಿಂದಿನ ಯಾವುದೇ ಹುಟ್ಟುಹಬ್ಬದಲ್ಲಿ ನಾನು ಇಷ್ಟೊಂದು ಸಂತಸ ಪಟ್ಟಿರಲಿಲ್ಲ. ಮಕ್ಕಳು ಹಾಗೂ 'ಡಾನ್ 2' ಚಿತ್ರತಂಡದೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಕಚಗುಳಿ ಇಟ್ಟಷ್ಟೇ ಖುಷಿಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಕಾಕತಾಳೀಯವೆಂಬಂತೆ ಶಾರುಖ್ ತಮ್ಮ 18 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ತಮ್ಮ ಸ್ವಂತ ನಿರ್ಮಾಣದ 'ರಾ.ಒನ್' ಚಿತ್ರದಲ್ಲಿ ಸೂಪರ್ ಹೀರೋ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶಾರುಖ್‌ಗೆ ವಯಸ್ಸಾಗುತ್ತಿದ್ದರೂ ಪ್ರೇಕ್ಷಕರ ಪಾಲಿಗೆ ಮಾತ್ರ ಅವರು ಇನ್ನೂ ಚಾಕೋಲೇಟ್ ಹೀರೋ.


Click it and Unblock the Notifications











