ಸಿದ್ಧಾರ್ಥ್ ರಾಯ್ ಜೊತೆ ವಿದ್ಯಾ ಬಾಲನ್ ಮದುವೆ ಠುಸ್
ಬಾಲಿವುಡ್ ತಾರೆ ವಿದ್ಯಾ ಬಾಲನ್ ಮದುವೆಗೆ ಮಂಗಳ ಹಾಡಲಾಗಿದೆ. ಸಿದ್ಧಾರ್ಥ್ ರಾಯ್ ಕಪೂರ್ ಎಂಬುವವರನ್ನು ವಿದ್ಯಾ ಕೈಹಿಡಿಯಲಿದ್ದು ಶೀಘ್ರದಲ್ಲೆ ಇವರಿಬ್ಬರು ಹಾರ ಬದಲಾಯಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.
ಈ ಬಗ್ಗೆ ವಿವರ ನೀಡಿರುವ ವಿದ್ಯಾ ಮ್ಯಾನೇಜರ್ ಕೆ ಸಂಜಯ್, ಇದೊಂದು ನಾನ್ ಸೆನ್ಸ್ ಸುದ್ದಿ. ಸದ್ಯಕ್ಕೆ ವಿದ್ಯಾ ಮುಂಬೈನಲ್ಲೇ ಇದ್ದು. ಮಿಲನ್ ಲೂಥ್‌ರಿಯಾಸ್ ಅವರ 'ದಿ ಡರ್ಟಿ ಪಿಕ್ಚರ್' ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ವಿದ್ಯಾ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸತ್ಯಕ್ಕೆ ದೂರವಾದದ್ದು. ಯಾರೋ ಹಬ್ಬಿಸಿದ ವದಂತಿ ಅಷ್ಟೇ ಎಂದಿದ್ದಾರೆ.
ಈ ಹಿಂದೆ ಇದೇ ರೀತಿ ರಾಣಿ ಮುಖರ್ಜಿಗೂ ಆಗಿತ್ತು. ಆದಿತ್ಯ ಚೋಪ್ರಾ ಅವರನ್ನು ಕೈಹಿಡಿಯಲಿದ್ದಾರೆ ಎಂದು ಸಾಕಷ್ಟು ಬಾರಿ ಬಿಂಬಿಸಲಾಗಿತ್ತು. ಆದರೆ ಅವೆಲ್ಲಾ ಕೇವಲ ಗಾಸಿಪ್‌ಗಳಷ್ಟೆ ಎಂಬುದು ಬಳಿಕ ಕನ್ಫರ್ಮ್ ಆಗಿತ್ತು. ವಿಚಿತ್ರ ಎಂದರೆ ಸಿದ್ಧಾರ್ಥ್ ರಾಯ್ ಜೊತೆ ವಿದ್ಯಾ ಹನಿಮೂನ್ ಕೂಡ ಆಚರಿಸಲಿದ್ದಾರೆ ಎನ್ನಲಾಗಿತ್ತು. (ಏಜೆನ್ಸೀಸ್)
English summary
All Vidya Balan fans can now take a breathe of relaxation as all the rumors about her marriage has been rubbished by UTV Motion Pictures head honcho and her alleged boyfriend Siddharth Roy Kapur.


Click it and Unblock the Notifications