ಇಂದಿಗೂ ಮಾಧುರಿ ಧಕ್ ಧಕ್ ಕರನೆ ಲಗಾ

80ರ ದಶಕದ ಬಾಲಿವುಡ್ ರಾಣಿ ಮಾಧುರಿಯೇ ನಿಸ್ಸಂಶಯವಾಗಿ ಈ ಕಾರ್ಯಕ್ರಮದ ಹೀರೊ. ಕುತೂಹಲಕಾರಿ ಸಂಗತಿಯೆಂದರೆ ಅಮಿತಾಭ್-ಗೆ ನೀಡಿದ್ದಕ್ಕಿಂತ ತುಂಬಾ ತುಂಬಾ ಕಡಿಮೆ ಹಣವನ್ನು ಮಾಧುರಿಗೆ ನೀಡಿದ್ದೇವೆ. ಆದರೂ ಆಕೆ ಕ್ಲಿಕ್ ಆಗುತ್ತಿದ್ದಾಳೆ ಎಂದು ಚಾನಲ್-ನವರು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ.
ಮದುವೆಯಾದ ನಟಿಯರು, ಅದರಲ್ಲೂ ಮಕ್ಕಳುಮರಿಗಳೊಂದಿಗೆ ಆರಾಮಾಗಿರುವ ನಟಿಯರು ಬಾಲಿವುಡ್-ಗೆ ವರ್ಜ್ಯ. ಬೇಡ್ವೇ ಬೇಡ ಎನ್ನುತ್ತದೆ. ಅದಕ್ಕೆಂದೇ 40ರ ಮಾಧುರಿ ನಾನೂ ಒಲ್ಲೆ ಎಂದು ಪರದೆ ಕೆ ಪೀಛೆ ಸರಿದಿದ್ದಳು. ಆದರೆ ಕಿತುತೆರೆ ಆಕೆಯನ್ನು ಜಗ್ಗಿ ಎಳೆದಿದೆ.
ಅಲ್ರೀ, ಕರೋಡ್ ಪತಿ ಅಮಿತಾಬ್ ಬಚ್ಚನ್ ಅವರೇ ಮುಕುಟವಿಲ್ಲದ ರಾಜ ಎಂದು ಕೊಂಡಿದ್ದಿವಿ. ಆದರೆ ಇದೇನಿದು ಮಾಧುರಿ ತೋರಿಸುತ್ತಿರುವ ಝಲಕ್. ಅಮಿತಾಬ್ ಕರೋಡ್ ಪತಿ ಕಾರ್ಯಕ್ರಮಕ್ಕೆ ಶೇ. 4ರಷ್ಟು ಆರಂಭ ಪಡೆದಿದ್ದರು. ಆದರೆ ಇದೇನಿದು ಮಾಧುರಿಯದ್ದು ಶೇ. 6ರಷ್ಟು ಆರಂಭ ಗಳಿಸಿಕೊಂಡಿದ್ದಾರೆ. ಇನ್ನು ಶಾರೂಖ್. ಆತನೂ ಅಷ್ಟೇ. ಎನ್ಡಿಟಿವಿ ಇಮ್ಯಾಜಿನ್ ಟಿವಿಯಲ್ಲಿ ಝೋರ್ ಕಾ ಝಟ್ಕಾ ಕಾರ್ಯಕ್ರಮದಲ್ಲಿ ಶೇ.3ರಷ್ಟು ವೀಕ್ಷಕರನ್ನು ತನ್ನತ್ತ ಜೋರಾಗಿಯೇ ಸೆಳೆದುಕೊಂಡಿದ್ದ. ಆದರೆ ಬಿಡ್ರಿ, ಮಾಧುರಿ ಕಾ ಜವಾಬ್ ನಹೀ. ಜೈಹೋ ಮಾಧುರಿ ಎಂದು ಸೋನಿ ಲಕಲಕಾಂತ ಮಾಧುರಿ ಜತೆ ನಾಟ್ಯವಾಡುತ್ತಿದೆ.


Click it and Unblock the Notifications











