ಐಶ್ವರ್ಯ ರೈ ಕಣ್ಣುಗಳ ಮೇಲೆ ಗಾಯಕ ಅರ್ಜುನ್ ಕಣ್ಣು
ಕಂದನ ನಿರೀಕ್ಷೆಯಲ್ಲಿರುವ ಬಾಲಿವುಡ್ ತಾರೆ ಐಶ್ವರ್ಯ ರೈ ತಮ್ಮ ಸುಂದರ ನಯನಗಳಿಂದಲೇ ಲಕ್ಷಾಂತರ ಅಭಿಮಾನಿಗಳ ಹೃದಯಕ್ಕೆ ಕಿಚ್ಚು ಹಚ್ಚಿದವರು. ಆಕೆಯ ಕಣ್ಣುಗಳ ಆಕರ್ಷಣೆ ವರ್ಣನೆಗೆ ನಿಲುಕದ ಸೌಂದರ್ಯ. ಈ ಅಪೂರ್ವ ಕಣ್ಣುಗಳ ಮೇಲೆ ಈಗ ಯುಕೆ ಮೂಲದ ಗಾಯಕ ಅರ್ಜುನ್ ಕೂಮ್ ಕಣ್ಣು ಬಿದ್ದಿದೆ.
'Remember Tonight' ಎಂಬ ಹಾಡೊಂದನ್ನು ಬರೆದಿರುವ ಅರ್ಜುನ್ ಆ ಹಾಡನ್ನು ಐಶು ಕಣ್ಣುಗಳಿಗೆ ಅರ್ಪಣೆ ಮಾಡಿದ್ದಾರೆ. ಐಶು ಕಣ್ಣುಗಳ ಆಕರ್ಷಣೆಯನ್ನು ಸಿಕ್ಕಾಪಟ್ಟೆ ಇಷ್ಟಪಟ್ಟಿರುವ ಅರ್ಜುನ್ ಅವುಗಳನ್ನು ಮನಸಾರೆ ಇಷ್ಟಪಡುತ್ತಿರುವುದಾಗಿ ಹೇಳಿದ್ದಾನೆ.
ಇಷ್ಟಕ್ಕೂ ಈ ಅರ್ಜುನ್ ಯಾರೆಂದರೆ, ಈತ ಈಗಷ್ಟೇ ಉದಯಯಿಸುತ್ತಿರುವ ತಾರೆ. ಬ್ರಿಟೀಷ್ ಏಷ್ಯನ್ ಮ್ಯೂಸಿಕ್‌ನಲ್ಲಿ ಅರ್ಜುನ್‌ರನ್ನು ರೈಸಿಂಗ್ ಸ್ಟಾರ್ ಎಂದು ಬಣ್ಣೀಸಲಾಗಿದೆ. ಈತನಂತೆ ಬಾಲಿವುಡ್ ತಾರೆಗಳ ಅಂದಚಂದಕ್ಕೆ ಮತ್ತೊಬ್ಬ ಬ್ರಿಟೀಷ್ ಜೇ ಸೀನ್ ಕೂಡ ಮಾರುಹೋಗಿದ್ದಾನೆ. (ಏಜೆನ್ಸೀಸ್)
More from Filmibeat
English summary
Aishwarya Rai Bachchan's eyes have captivated the imagination of millions. Now UK based singer Arjun Coom has written a song dedicated to Aishwarya Rai Bachchan's eyes. In the song titled 'Remember Tonight,' Arjun Coom has described the beauty of Ash's eyes and also expressed how much he is in love with them.


Click it and Unblock the Notifications











