ಅಮಿತಾಬ್ ಬಚ್ಚನ್ ಬಿಗ್‌ಅಡ್ಡ ಡಾಟ್ ಕಾಂ ಅಸ್ತಂಗತ
ಇಷ್ಟು ದಿನ ಬಿಗ್ ಬಿ ಅಮಿತಾಬ್ ಬಚ್ಚನ್ ತಮ್ಮ ಅಭಿಮಾನಿಗಳೊಂದಿಗೆ Bigadda.com ಬ್ಲಾಗ್ ಮೂಲಕ ಕಷ್ಟಸುಖ ಹಂಚಿಕೊಳ್ಳುತ್ತಿದ್ದರು. ಈಗ ಈ ಬ್ಲಾಗ್ ಕೊನೆ ದಿನಗಳನ್ನು ಎಣಿಸುತ್ತಿದ್ದು ಶೀಘ್ರದಲ್ಲೆ ಕೊನೆಯುಸಿರೆಳೆಯಲಿದೆ. ಅಮಿತಾಬ್ ಬಚ್ಚನ್ ತಮ್ಮ ಅಭಿಮಾನಿಗಳನ್ನು ಮುಖಾಮುಖಿಯಾಗಲು ಹೊಸ ವೇದಿಕೆ ಹುಡುಕುತ್ತಿದ್ದಾರೆ.
ಸದ್ಯಕ್ಕೆ ಬಿಗ್‌ಅಡ್ಡವನ್ನು ನೀರೆರೆದು ಪೋಷಿಸುತ್ತಿರುವ ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ಈ ಬ್ಲಾಗನ್ನು ಇ-ಕಾಮರ್ಸ್ ಪೋರ್ಟಲ್ ಆಗಿ ಬದಲಾಯಿಸಿದೆ. ಜುಲೈ 15ರಿಂದ ಬಿಗ್‌ಅಡ್ಡ ಡಾಟ್ ಕಾಮ್‌ನಲ್ಲಿ ಯಾವುದೇ ಮಾಹಿತಿ ಸಿಗುವುದಿಲ್ಲ. ಬಿಗ್‌ಅಡ್ಡ ಬಂದ್ ಆಗಲಿದೆ ಎಂಬ ಮಾಹಿತಿಯನ್ನು ತನ್ನ ಅಭಿಮಾನಿಗಳಿಗೆ ಅಮಿತಾಬ್ ರವಾನಿಸಿದ್ದಾರೆ.
"Bigadda.comಗೆ ನೀವು ಇಷ್ಟು ತೋರಿದ ಕಾಳಜಿಗೆ ನಾನು ಚಿರಋಣಿಯಾಗಿದ್ದೇನೆ.ಈಗ ಇ ಕಾಮರ್ಸ್ ಪೋರ್ಟಲ್ ಆಗಿ ಇದನ್ನು ಬದಲಾಯಿಸುತ್ತಿದ್ದೇವೆ. ಈ ಮೂಲಕ ಬ್ರಾಂಡೆಡ್ ಉತ್ಪನ್ನಗಳನ್ನು ನಿಮಗೆ ತಲುಪಿಸಲಿದ್ದೇವೆ. ಇದಕ್ಕೆ ನಿಮ್ಮ ಎಂದಿನ ಸಹಕಾರ ಇದ್ದೇ ಇದೆ ಎಂದು ಭಾವಿಸಿದ್ದೇವೆ" ಎಂಬ ಮಾಹಿತಿ ಬಿಗ್‌ಅಡ್ಡದಲ್ಲಿದೆ.
"ಬಿಗ್‌ಅಡ್ಡದಲ್ಲಿ ನೀವು ಹಾಕಿರುವ ಮಾಹಿತಿ, ಫೋಟೋ, ಹಾಡುಗಳು, ಛಾಯಾಚಿತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಜುಲೈ 15, 2011ರಿಂದ ನೀವು ಹಾಕಿರುವ ಯಾವುದೇ ಮಾಹಿತಿ ನಿಮಗೆ ಲಭ್ಯವಿರುವುದಿಲ್ಲ. ಬಿಗ್‌ಬಿ ಅವರ ಬ್ಲಾಗ್ ಬಾಗಿಲು ಮುಚ್ಚಲಿದೆ" ಎಂಬ ಸಂದೇಶ ಬ್ಲಾಗಿನಲ್ಲಿ ರವಾನಿಸಲಾಗಿದೆ.(ಏಜೆನ್ಸೀಸ್)


Click it and Unblock the Notifications