»   » ಶಾರುಖ್, ಕಾಜೋಲ್ ಜೋಡಿ ಚಿತ್ರ 750ನೇ ವಾರ

ಶಾರುಖ್, ಕಾಜೋಲ್ ಜೋಡಿ ಚಿತ್ರ 750ನೇ ವಾರ

Posted By:
Subscribe to Filmibeat Kannada

ಸುಮಾರು 14 ವರ್ಷಗಳ ಕಾಲ ಸತತವಾಗಿ ಒಂದು ಚಿತ್ರ ಪ್ರೇಕ್ಷಕರನ್ನು ರಂಜಿಸುತ್ತಾ ಚಿತ್ರಮಂದಿರದಲ್ಲಿದೆ ಎಂದರೆ ಅದು ಅದ್ಭುತವೇ ಸರಿ> ಈ ಅದ್ಭುತಕ್ಕೆ ಕಾರಣ, ಶಾರುಖ್ ಖಾನ್ ಕಾಜೋಲ್ ಅವರ ಯಶಸ್ವಿ ಜೋಡಿ ಮಾಡಿರುವ ಮೋಡಿ, ಜತಿನ್ ಲಲೀತ್ ಸಂಗೀತ, ಆದಿತ್ಯ ಛೋಪ್ರಾರ ನವಿರಾದ ನಿರೂಪಣೆ ಎಲ್ಲರನ್ನೂ ಇಂದಿಗೂ ಮೋಡಿ ಮಾಡದೇ ಬಿಡದು. ಸುಮಾರು 189 ನಿಮಿಷಗಳ ಕಾಲ ಪರದೆ ಮೇಲೆ ಮೂಡುವ ಈ ಪ್ರೇಮಕಾವ್ಯದ ಹೆಸರು ' ದಿಲ್ ವಾಲೇ ದುಲ್ಹನಿಯಾ ಲೇ ಜಾಯೆಂಗೆ'

20 ಅಕ್ಟೋಬರ್ 1995 ರಲ್ಲಿ ಬಿಡುಗಡೆಗೊಂಡ ಈ ಚಿತ್ರ ಭಾರತದಲ್ಲಿ 580 ಮಿಲಿಯನ್ ಹಾಗೂ ಸಾಗರೋತ್ತರ ದೇಶಗಳಲ್ಲಿ 175 ಮಿಲಿಯನ್ ಹಣ ದೋಚಿತ್ತು. ಕಳೆದ ವಾರ ಈ ಚಿತ್ರ ಇನ್ನೊಂದು ಮೈಲಿಗಲ್ಲು ದಾಟಿತು. ಮುಂಬೈನ ಮರಾಠ ಮಂದಿರ್ ಚಿತ್ರಮಂದಿರದಲ್ಲಿ ಸತತವಾಗಿ 750ನೇ ವಾರಗಳ ಕಾಲ ಪ್ರದರ್ಶನಗೊಂಡ ದಾಖಲೆ ಬರೆಯಿತು.

ಎನ್ನಾರೈ ಯುವಕನೊಬ್ಬ ಸಹಪಯಣಿಗಳಾದ ಯುವತಿಯೊಂದಿಗೆ ಮೋಹಗೊಂಡು ಆಕೆಯನ್ನು ಹಿಂಬಾಳಿಸಿಕೊಂಡು ಆಕೆಯ ಊರು ತಲುಪಿ, ಆಕೆಯ ಮನೆ ಹಾಗೂ ಮನ ಗೆಲ್ಲುವ ಸರಳ ಪ್ರೇಮಕಥೆಯನ್ನು ಡಿಡಿಎಲ್ ಜ್ಎ ಚಿತ್ರಹೊಂದಿದೆ. ಈ ಚಿತ್ರದ ನಂತರ ಶಾರುಖ್ ಹಾಗೂ ಕಾಜೋಲ್ ಅವರು ತೆರೆಯ ಮೇಲಿನ ಅತ್ಯುತ್ತಮ ಪ್ರಣಯ ಜೋಡಿಗಳು ಎಂದು ಹೆಸರುವಾಸಿಯಾದರು.ಇತ್ತೀಚೆಗೆ ಈ ಜೋಡಿ ಅಭಿನಯಿಸಿದ ಮೈ ನೇಮ್ ಇಸ್ ಖಾನ್ ಚಿತ್ರ ಕೂಡ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಗಳಿಕೆಯನ್ನು ಕಂಡಿದೆ.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X