ಬಾಲಿವುಡ್ ನಲ್ಲಿ ದೂಕುಡು: ಸಲ್ಮಾನ್ ಖಾನ್ ತೆಕ್ಕೆಗೆ?

salman-khan
ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ (ಪ್ರಿನ್ಸ್) ಮಹೇಶ್ ಬಾಬು ನಟನೆ, ಶ್ರೀನು ವೈಟ್ಲಾ ನಿರ್ದೇಶನದ ಚಿತ್ರ "ದೂಕುಡು" ಎರ್ರಾಬಿರ್ರಿ ಸೂಪರ್ ಹಿಟ್ ಆಗುವುದರೊಂದಿಗೆ ಮಹೇಶ್ ಬಾಬು ಇನ್ನೂ ಎತ್ತರೆತ್ತರಕ್ಕೆ ಏರಿದರೆ, ನಿರ್ದೇಶಕ ಶ್ರೀನು ವೈಟ್ಲಾಗೆ ಬಾಲಿವುಡ್ ಬಾಗಿಲು ತೆರೆದಿದೆ. ಇದೀಗ ಹಿಂದಿಯಲ್ಲಿ ಈ ಚಿತ್ರದ ರೀಮೇಕ್ ನಿರ್ದೇಶನಕ್ಕೆ ರೆಡಿಯಾಗಿರುವ ವೈಟ್ಲಾಗೆ, ಹೀರೊ ಆಗಿ ಸಾಥ್ ನೀಡುತ್ತಿರುವವರು ಸಲ್ಮಾನ್ ಖಾನ್.

ಶ್ರೀನು ವೈಟ್ಲಾ ಅವರೇ ತಮ್ಮ ಬಾಲಿವುಡ್ ಎಂಟ್ರಿಯನ್ನು ಖಾತ್ರಿಪಡಿಸಿದ್ದಾರೆ. ಆದರೆ ಸಲ್ಮಾನ್ ಖಾನ್ ತಮ್ಮ "ದೂಕುಡು" ರೀಮೇಕ್ ಹಿಂದಿ ಚಿತ್ರಕ್ಕೆ ಹೀರೋ ಎಂಬುದನ್ನು ಅವರು ಖಚಿತಪಡಿಸಿಲ್ಲ. ಸದ್ಯ ಅಮೇರಿಕಾದಲ್ಲಿರುವ ಸಲ್ಮಾನ್ ಖಾನ್ ಅಕ್ಟೋಬರ್ 12 ರಂದು ಭಾರತಕ್ಕೆ ಬರಲಿದ್ದು ನಂತರ "ದೂಕುಡು" ಚಿತ್ರ ನೋಡಿದ ಮೇಲೆ ಮುಂದಿನದು ಮುಂದೆ ನಿರ್ಧಾರವಾಗಲಿದೆ ಎಂದಿದ್ದಾರೆ ಶ್ರೀನು ವೈಟ್ಲಾ.

ಈ ನಿರ್ದೇಶಕರ 2008ರ ಸಿನಿಮಾ "ರೆಡಿ" ಅದೇ ಹೆಸರಿನಲ್ಲಿ ಬಾಲಿವುಡ್ ತೆರೆಗೆ ಬಂದಿತ್ತು. ಹಾಗೇ, "ಧೀ" ಕೂಡ ಸಂಜಯ್ ದತ್ ನಾಯಕತ್ವದಲ್ಲಿ ನಿರ್ಮಾಣ ಹಂತದಲ್ಲಿದೆ. ಇದೀಗ "ದೂಕುಡು" ಚಿತ್ರ ತೆರೆಗೆ ಬರಲಿರುವುದು ಬಾಲಿವುಡ್ ನಲ್ಲಿ ಈ ತೆಲುಗು ನಿರ್ದೇಶಕರ ಯಶಸ್ವೀ ಪಯಣಕ್ಕೆ ಮುನ್ನುಡಿಯಾದರೆ, ಸಲ್ಮಾನ್ ಖಾನ್ ಹೆಸರು ಇಲ್ಲಿ ಕೇಳಿಬರುತ್ತಿರುವುದು ಸಲ್ಲೂ ಮಿಯಾ ಅಭಿಮಾನಿಗಳಿಗೆ ಸ್ವರ್ಗಸಮಾಚಾರ ಆಗಿದೆ. ಕಾಲನ ಉತ್ತರಕ್ಕೆ ಕಾಯಲೇಬೇಕು!

More from Filmibeat

English summary
Srinu Vytla is all set to enter Bollywood. The filmmaker, who is basking in the success of Dookudu, is gearing up to remake the Telugu film in his Bollywood debut movie, which will reportedly star Salman Khan.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X