ಜಾನ್ ಅಬ್ರಹಾಂ ಪೃಷ್ಠಕ್ಕೆ ರು.10 ಕೋಟಿ ವಿಮೆ!
ಬಾಲಿವುಡ್ ನಟ ಜಾನ್ ಅಬ್ರಹಾಂಗೆ ಸಖತ್ ಐಡಿಯಾ ಬಂದಿದೆ. ಅವರು ತಮ್ಮ ಪೃಷ್ಠಕ್ಕೆ ವಿಮೆ ಮಾಡಿಸಲು ಮುಂದಾಗಿದ್ದಾರೆ. 'ದೋಸ್ತಾನಾ' ಚಿತ್ರದಲ್ಲಿ ಹಳದಿ ಬಣ್ಣದ ಚಡ್ಡಿಯುಟ್ಟು ತಮ್ಮ ದಷ್ಟಪುಷ್ಟ ಪೃಷ್ಠವನ್ನು ಪ್ರದರ್ಶಿಸಿದ್ದರು. ಇಂತಹ ದಷ್ಟಪುಷ್ಟ ಪೃಷ್ಠಕ್ಕೆ ವಿಮೆ ಮಾಡಿಸದಿದ್ದರೆ ಹೇಗೆ? ಎಂಬ ಐಡಿಯಾ ಬಂದದ್ದೆ ತಡ, ರು. 10 ಕೋಟಿಗೆ ವಿಮೆ ಮಾಡಿಸಲು ಅಣಿಯಾಗಿದ್ದಾರೆ.
ಹಾಲಿವುಡ್ ತಾರೆ ಜೆನ್ನಿಫರ್ ಲೋಪೆಜ್ ತರಹ ಜಾನ್ ಅಬ್ರಹಾಂ ತಮ್ಮ ದೇಹದ ಅಂಗವೊಂದಕ್ಕೆ ವಿಮೆ ಮಾಡಿಸಲು ಮುಂದಡಿ ಇಟ್ಟಿದ್ದಾರೆ. ಈ ಮೂಲಕ ಪೃಷ್ಠಕ್ಕೆ ವಿಮೆ ಮಾಡಿಸುತ್ತಿರುವ ಮೊದಲ ಭಾರತೀಯ ನಟನಾಗುತ್ತಿದ್ದಾರೆ ಜಾನ್ ಅಬ್ರಹಾಂ. ಪಾಶ್ಚಿಮಾತ್ಯ ರಾಷ್ಟ್ರಗಳಂತೆ ಭಾರತೀಯ ವಿಮಾ ಕಂಪನಿಗಳು ದೇಹದ ಭಾಗಗಳಿಗೆ ವಿಮಾ ಸೌಲಭ್ಯ ಕೊಡುವಷ್ಟು ಜನಪ್ರಿಯವಾಗಿಲ್ಲ.
ವಿಷಯ ಹೀಗಿದ್ದಗೂ ಕೆಲವು ವಿಮಾ ಕಂಪನಿಗಳು ಜಾನ್ ಅಬ್ರಹಾಂ ಪೃಷ್ಠಕ್ಕೆ ವಿಮೆಯ ರಕ್ಷಣೆ ಕಲ್ಪಿಸಲು ಮುಂದಾಗಿವೆ. ಜಾನ್ ಅಬ್ರಹಾಂ ಇತ್ತೀಚೆಗೆ ಸ್ನಾಯು ದೌರ್ಬಲ್ಯಕ್ಕೆ ಒಳಗಾಗಿದ್ದರು. ಕೆಲದಿನಗಳ ಮಟ್ಟಿಗೆ ಜಿಮ್ ನಿಂದಲೂ ದೂರ ಉಳಿದಿದ್ದರು. ಇದೀಗ ಚೇತರಿಸಿಕೊಂಡಿರುವ ಅವರು ವ್ಯಾಯಾಮದಲ್ಲಿ ನಿರತರಾಗಿದ್ದಾರೆ.
ಮೂಲಗಳ ಪ್ರಕಾರ, ರು.10 ಕೋಟಿಗೆ ವಿಮೆ ಮಾಡಿಸುವುದು ಭಾರಿ ವೆಚ್ಚದ ಬಾಬತ್ತು. ಪ್ರೀಮಿಯಂ ಹಣ ಊಹಿಸುವುದು ಅಸಾಧ್ಯ. ಆದರೆ ಜಾನ್ ಇದೆಲ್ಲಕ್ಕೂ ಸಿದ್ಧವಾಗಿದ್ದಾರೆ. ನನ್ನ ಕಡೆಯಿಂದ ಏನಾಗಬೇಕು ಅದನ್ನು ಮಾಡಲು ನಾನು ರೆಡಿ. ಈಗಾಗಲೆ ಹಲವಾರು ಮಂದಿಯನ್ನು ಭೇಟಿಯಾಗಿದ್ದೇನೆ ಎನ್ನುತ್ತಾರೆ ಜಾನ್ ಅಬ್ರಹಾಂ.
ದಕ್ಷಿಣದ ಜನಪ್ರಿಯ ತಾರೆ ರಜನಿಕಾಂತ್ ಈಗಾಗಲೆ ತಮ್ಮ ಧ್ವನಿಗೆ ವಿಮೆ ಮಾಡಿಸಿದ್ದಾರೆ. ಪೂರ್ವಾನುಮತಿ ಇಲ್ಲದೆ ರಜನಿಕಾಂತ್ ಧ್ವನಿಯನ್ನು ಎಲ್ಲೂ ಬಳಕೆ ಮಾಡುವಂತಿಲ್ಲ. ಈಗಾಗಲೆ ಹಾಲಿವುಡ್ ನಲ್ಲಿ ಕಾಲಿಗೆ, ಕೈಗೆ, ಹೊಕ್ಕಳಿಗೆ ವಿಮೆ ಮಾಡಿಸಿದ್ದಾರೆ. ಆದರೆ ಜಾನ್ ಅಬ್ರಹಾಂ ಇನ್ನೂ ಒಂದು ಅಡಿ ಮುಂದಿಟ್ಟು ತಮ್ಮ ಪೃಷ್ಠಕ್ಕೆ ವಿಮೆ ಮಾಡಿಸಲು ಹೊರಟಿದ್ದಾರೆ.


Click it and Unblock the Notifications











