ಪ್ರಿಯಾಂಕ ಛೋಪ್ರಾ ಗಂಟಲು ಕೆಡಲು ಯಾರು ಕಾರಣ!

ಬರ್ಫೀ ಸಿನಿಮಾ ಶೂಟಿಂಗ್, ಇನ್ನಿತರ ಸಿನಿಮಾ ಹಾಗೂ ಡಾನ್ಸ್ ಪೈನಲ್ಸ್ ಅದೂ ಇದೂ ಎಂದು ಸಖತ್ ಬ್ಯುಸಿ ಆಗಿರುವ ಪ್ರಿಯಾಂಕ ಗಂಟಲು ಕೆಡಲು ಕಾರಣವೇನು ಎಂದು ತಲೆಕೆರೆದುಕೊಳ್ಳುತ್ತಿರುವ ಬಾಲಿವುಡ್ ಮಂದಿಗೆ ಶಾರುಖ್ ಖಾನ್ ಹೆಸರೇ ತಲೆಯಲ್ಲಿ ಬರುತ್ತಿದೆಯಂತೆ. ಇತ್ತೀಚಿಗೆ ಅತೀ ಸಲುಗೆಯಿಂದಿರುವ ಈ ಜೋಡಿಯಿಂದ ಗೌರಿ ಖಾನ್ ತಲೆ ಕೂಡ ಗಿರಿಗಿಟ್ಲೆ ಆಗಿರುವ ಸುದ್ದಿ ಕೇಳಿಬಂದಿದೆ.
ಅಂತೂ 29 ವರ್ಷದ ಬಾಲಿವುಡ್ ಬ್ಯೂಟಿ ಪ್ರಿಯಾಂಕ ಕೈನಲ್ಲಿ ಅರ್ಧ ಡಜನ್ ಗಿಂತ ಹೆಚ್ಚು ಸಿನಮಾ ಇದ್ದರೂ ಆಕೆ ಅಂತಾರಾಷ್ಟ್ರೀಯ ಮಟ್ಟದ ಮ್ಯೂಸಿಕ್ ಆಲ್ಬಾಮ್ ನಲ್ಲಿ ಕೆಲಸ ಮಾಡುತ್ತಿರುವುದು ಹಲವರಿಗೆ ಆಶ್ಚರ್ಯವನ್ನುಂಟುಮಾಡಿದೆ. ಆಕಡೆ ಸಂಗೀತ-ಸಿನಿಮಾ, ಈ ಕಡೆ ಶಾರುಖ್ ಎಂದು ಬಾಲಿವುಡ್ ಕುಹಕವಾಡುತ್ತಿದ್ದರೆ, ಪ್ರಿಯಾಂಕ ಮಾತ್ರ ನಾನಿರುವುದೇ ಹೀಗೆ ಎಂದು ತಲೆಕೆಡಿಸಿಕೊಳ್ಳದೇ ಧ್ವನಿಕೆಡಿಸಿಕೊಂಡು ಕೂತಿದ್ದಾಳಂತೆ.
ಅಯ್ಯೋ ಪಾಪ, ಯಾರಾದರೂ ಅರ್ಜೆಂಟ್ ಔಷಧ ತಿಳಿಸಿ ಟ್ವಿಟ್ ಮಾಡಿ, ಇಲ್ಲಾಂದ್ರೆ ಶಾರುಖ್ ಜೊತೆ ಯಾರ್ರೀ ಮಾತಾಡೋದು! (ಏಜೆನ್ಸೀಸ್)
More from Filmibeat
English summary
Actress Priyanka Chopra is down with a throat infection, and dying to get her voice back. Regarding this, Priyanka became very upset and tweeted like this "my voice back... gonna be in the studio soon... any quick fixes?". Because She is also busy working on her international music album.


Click it and Unblock the Notifications











