ಸಲ್ಲು ಮನೆಯಲ್ಲಿ ಊಟ ಮಾಡಿ ಕೈತೊಳೆದುಕೊಂಡ ಕತ್ರಿನಾ

By Rajendra

ಬಾಲಿವುಡ್‌ನ ಹಳೆಯ ಜೋಡಿ ಮತ್ತೆ ಒಂದಾಗಿದೆ. ಬಾಲಿವುಡ್ ತಾರೆಗಳಾದ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ತಮ್ಮ ನಡುವಿನ ಅಂತರವನ್ನು ಇಷ್ಟು ದಿನ ಕಾದಿರಿಸಿಕೊಂದೇ ಬಂದಿದ್ದರು. ಆದರೆ ಮಂಗಳವಾರ ಇವರಿಬ್ಬರು ಒಟ್ಟಿಗೆ ಕಳೆದಿದ್ದಾರೆ. ಕೂತು ಜೊತೆಯಲ್ಲೇ ಊಟ ಮಾಡಿದ್ದಾರೆ. ಮನಸು ಬಿಚ್ಚಿ ಮಾತನಾಡಿದ್ದಾರೆ!

ಇಷ್ಟೆಲ್ಲಾ ನಡೆದಿರುವುದು ಕಬೀರ್ ಖಾನ್ ನಿರ್ದೇಶನದ ಯಶ್ ರಾಜ್ ಫಿಲಂಸ್‌ನ ಫೋಟೋ ಶೂಟ್‌ನಲ್ಲಿ. ವಿಶೇಷ ಎಂದರೆ ಈ ಫೋಟೋ ಶೂಟ್ ಸಲ್ಮಾನ್ ಅವರ ಗ್ಯಾಲಾಕ್ಸಿ ಅಪಾರ್ಟ್‌ಮೆಂಟ್‌ನ ಕಾಂಪೌಂಡ್‌ನಲ್ಲೇ ನಡೆದಿರುವುದು. ಫೋಟೋ ಶೂಟ್ ಬಳಿಕ ಬನ್ನಿ ಊಟ ಮಾಡಿಕೊಂಡು ಹೋಗಿ ಎಂದು ಕತ್ರಿನಾಳನ್ನು ಸಲ್ಲು ಆಹ್ವಾನಿಸಿದರಂತೆ. ಬಳಿಕ ಇಬ್ಬರೂ ಊಟ ಮಾಡುತ್ತಾ ಕಷ್ಟ ಸುಖ ಮಾತನಾಡಿಕೊಂಡಿದ್ದಾರೆ ಎನ್ನುತ್ತವೆ ಮೂಲಗಳು.

ಕಳೆದ ಒಂದು ವರ್ಷದಿಂದ ಈ ಜೋಡಿ ನಾನೊಂದು ತೀರ ನೀನೊಂದು ತೀರ ಎಂಬಂತಿದ್ದರು. ಈಗ ಮತ್ತೆ ಇಬ್ಬರ ನಡುವೆ ಸ್ನೇಹ ಚಿಗುರಿದೆ. ಮಾಮರವೆಲ್ಲೋ ಕೋಗಿಲೆ ಅಲ್ಲೇ ಎಂಬಂತಾಗಿದೆ. "ಇದೊಂದು ರೀತಿ ವೃತ್ತಿಗೆ ಸಂಬಂಧಿಸಿದ ಭೇಟಿ ಅಷ್ಟೇ. ಇದರಲ್ಲೇನು ವಿಶೇಷವಿಲ್ಲ." ಎಂದಿದ್ದಾರೆ ಕತ್ರಿನಾ ಕೈಫ್. ಆದರೆ ಸಲ್ಲು ಕುಟುಂಬದವರೊಂದಿಗೂ ಕತ್ರಿನಾ ಚೆನ್ನಾಗಿ ಹೊಂದಿಕೊಂಡಿದ್ದರು ಎಂಬ ಸುದ್ದಿಯೂ ಇದೆ.

More from Filmibeat

English summary
Bollywood stars Salman Khan and Katrina Kaif met yesterday for the photo shoot of Kabir Khan's next, a Yash Raj film, followed by lunch at Salman's place. The couple split a year ago and was last seen at an award function in February.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X