ತಾರೆ ಶಿಲ್ಪಾ ಶೆಟ್ಟಿ ಅದ್ದೂರಿ ಸೀಮಂತಕ್ಕೆ ಮುಂಬೈ ಸಾಕ್ಷಿ

ಐಶ್ವರ್ಯಾ ರೇ ಬಚ್ಚನ್ ಸೀಮಂತ, ಹೆರಿಗೆ, ಮಗು ಸುದ್ದಿಯ ನಂತರ ಅತೀ ಹೆಚ್ಚು ಜನರ ಕುತೂಹಲಕ್ಕೆ ವಿಷಯವಾಗಿರುವುದು ಬಾಲಿವುಡ್ ನ ಮತ್ತೊಬ್ಬ ತಾರೆ ಶಿಲ್ಪಾ ಶೆಟ್ಟಿಯ ಮದುವೆ, ಹಾಗೂ ಗರ್ಭವತಿಯಾಗಿರುವ ವಿಷಯ. ಇದೀಗ ಅವರ ಸೀಮಂತ ಕಾರ್ಯವೂ ಮುಂಬೈನಲ್ಲಿ ಅತಿ ಅದ್ದೂರಿಯಾಗಿ ನಡೆದು ಎಲ್ಲಾ ಕಡೆ ಸುದ್ದಿ ಹಬ್ಬಿದೆ. ಶಿಲ್ಪಾರ ಸಡಗರ, ಸಂಭ್ರಮ ಮುಗಿಲುಮುಟ್ಟಿದೆ.

ಮುಂಬೈನ ಸುಬರ್ಮಾನಿನಲ್ಲಿರುವ ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಮನೆಯಲ್ಲಿ ನಡೆದ ಅದ್ದೂರಿ 'ಸೀಮಂತ' ಕಾರ್ಯಕ್ರಮಕ್ಕೆ ಹಲವಾರು ಬಾಲಿವುಡ್ ಗಣ್ಯರು ಆಗಮಿಸಿದ್ದರು. ಸಾಕಷ್ಟು ಸುಂದರಿಯರ ದಂಡೇ ಅಲ್ಲಿ ನೆರೆದಿತ್ತು. ಅಷ್ಟೇ ಅಲ್ಲ, ಬಾಲಿವುಡ್ ತಾರಾ ಅಮ್ಮಂದಿರಾದ ರವೀನಾ ಟಂಡನ್, ಮಲೈಕಾ ಅರೋರಾ ಖಾನ್, ಅಮೃತಾ ಅರೋರಾ ಹಾಗೂ ಸಂಜಯ್ ದತ್ ಪತ್ನಿ ಮಾನ್ಯತಾ ದತ್ ಮುಂತಾದವರು ಆಗಮಿಸಿ ಶಿಲ್ಪಾಗೆ ಶುಭ ಹಾರೈಸಿದ್ದಾರೆ.

ಇದೀಗ ಒಂಬತ್ತು ತಿಂಗಳು ತುಂಬಿರುವ ಶಿಲ್ಪಾಗೆ ಅವರ ತಾಯಿ ಸುನಂದಾ ಹಾಗೂ ಪತಿ ರಾಜ್ ಕುಂದ್ರಾ ಜೊತೆಯಲ್ಲೇ ಇದ್ದು ಹಾರೈಸಿದ್ದಾರೆ. ನೇಹಾ ಧೂಪಿಯಾ, ಸಮೀರಾ ರೆಡ್ಡಿ, ಅರ್ಪಿತಾ ಖಾನ್, ಫರಾಹ್ ಖಾನ್, ಹಾಗೂ ಇತರರು ಆಗಮಿಸಿ ಕಾರ್ಯಕ್ರಮದ ಕಳೆ ಹೆಚ್ಚಿಸಿದ್ದರು. ಶಿಲ್ಪಾ ಶೆಟ್ಟಿ ಮಂಗಳೂರಿನ ಕುಟುಂಬದ ಸಕಲರೂ ಕಾರ್ಯಕ್ರಮಕ್ಕೆ ಬಂದು ಶುಭ ಕೋರಿದ್ದು ವಿಶೇಷವೆನಿಸಿದೆ. ಒಟ್ಟಿನಲ್ಲಿ ಶಿಲ್ಪಾ ಸೀಮಂತದ ಸುದ್ದಿ ಸಾಗರದಾಚೆಗೂ ಹಬ್ಬಿದೆ. (ಏಜೆನ್ಸೀಸ್)

More from Filmibeat

English summary
Shilpa Shetty's 'godh bharai' or baby shower ceremony was attended by several Bollywood beauties at her residence in suburban Mumbai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X