ದೇಸಿ ಬಾಯ್ಸ್ ಹಿಂದಿಕ್ಕಿದ 'ದಿ ಡರ್ಟಿ ಪಿಕ್ಚರ್' ಗಳಿಕೆ

ಬಹುನಿರೀಕ್ಷೆಯ ಬಾಲಿವುಡ್ ಚಿತ್ರಗಳು ಒಂದರ ಹಿಂದೆ ಇನ್ನೊಂದು ಬಿಡುಗಡೆಯಾಗುತ್ತಿವೆ. ರಾ ಒನ್, ರಾಕ್ ಸ್ಟಾರ್, ದೇಸೀ ಬಾಯ್ಸ್ ಹಾಗೂ ಇದೀಗ 'ದಿ ಡರ್ಟಿ ಪಿಕ್ಚರ್' ಹೀಗೆ ಬಾಲಿವುಡ್ ಚಿತ್ರಗಳು ತೆರೆಗೆ ಅಪ್ಪಳಿಸುತ್ತಿವೆ. ಜೊತೆಗೆ ಒಂದು ಇನ್ನೊಂದಕ್ಕಿಂತ ಹೆಚ್ಚು ಅಥವಾ ಕಡಿಮೆ ಗಳಿಸಿ ರಣರಂಗ ಏರ್ಪಟ್ಟು ಪ್ರೇಕ್ಷಕರು ಹಾಗೂ ಬಾಕ್ಸ್ ಆಫೀಸ್ ಪರಿಣಿತರನ್ನು ಕುತೂಹಲಕ್ಕೆ ಜಾರಿಸಿವೆ.

ಇದೀಗ ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿರುವ 'ದಿ ಡರ್ಟಿ ಪಿಕ್ಚರ್' ಬಾಲಿವುಡ್ ಚಿತ್ರ ಇದಕ್ಕೂ ಮೊದಲು ಬಿಡುಗಡೆಯಾಗಿದ್ದ 'ದೇಶೀ ಬಾಯ್ಸ್' ಚಿತ್ರದ ಬಾಕ್ಸ್ ಆಫೀಸ್ ಗಳಿಕೆಯನ್ನು ಹಿಂದಿಕ್ಕಿದೆ. ಬಿಡುಗಡೆಯಾದ ಮೊದಲ ದಿನ ದೇಸಿ ಬಾಯ್ಸ್ ರು. 9 ಕೋಟಿ ಗಳಿಸಿದ್ದರೆ ದಿ ಡರ್ಟಿ ಪಿಕ್ಚರ್ ರು. 10 ಕೋಟಿ ಗಳಿಸಿದೆ. ಭಾರತೀಯ ಮಾರುಕಟ್ಟೆಯ ಬಾಕ್ಸ್ ಆಫೀಸ್ ರಿಪೋರ್ಟ್ ಪ್ರಕಾರ ದಿ ಡರ್ಟಿ ಪಿಕ್ಚರ್ ದೇಸಿ ಬಾಯ್ಸ್ ಚಿತ್ರವನ್ನು ಹಿಂದಿಕ್ಕಿದ್ದು ಸ್ಪಷ್ಟವಾಗಿದೆ.

ಅಕ್ಷಯ್ ಕುಮಾರ್, ಜಾನ್ ಅಬ್ರಹಾಂ, ದೀಪಿಕಾ ಹಾಗೂ ಚಿತ್ರಾಂಗದಾ ಸಿಂಗ್ ತಾರಾಗಣ ಹೊಂದಿದ್ದ ದೇಸಿ ಬಾಯ್ಸ್ ಬಹುನಿರೀಕ್ಷೆ ಮೂಡಿಸಿತ್ತು. ಅದೇ ರೀತಿ, ವಿದ್ಯಾ ಬಾಲನ್, ಇಮ್ರಾನ್ ಹಶ್ಮಿ, ನಾಸೀರುದ್ದೀನ್ ಷಾ, ಹಾಗೂ ತುಷಾರ್ ಕಪೂರ್ ತಾರಾಗಣದ ಸಿಲ್ಕ್ ಸ್ಮಿತಾ ನಿಜಜೀವನವನ್ನು ಆಧರಿಸಿದ ಡರ್ಟಿ ಪಿಕ್ಚರ್ ಕೂಡ ಬಹುನಿರೀಕ್ಷಿತ ಚಿತ್ರವೇ. ಈಗ ಮೊದಲ ದಿನದ ಗಳಿಕೆಯಲ್ಲಿ ದೇಸಿ ಬಾಯ್ಸ್ ಚಿತ್ರವನ್ನು ದಿ ಡರ್ಟಿ ಪಿಕ್ಚರ್ ಚಿತ್ರ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಹಿಂದಿಕ್ಕಿದೆ.

More from Filmibeat

English summary
Bollywood movie The Dirty Picture has beaten the record of film Desi Boyz which had collected Rs 9 crore at the Indian Box Office on the first day of its release. Vidya Balan starrer The Dirty Picture has raked in Rs 10 crore at the collection centers on the opening day.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X