»   » ಸ್ಟಿಂಗ್ ಆಪರೇಷನ್ ಕರಾಳ ಮುಖ ಬಯಲಿಗೆ

ಸ್ಟಿಂಗ್ ಆಪರೇಷನ್ ಕರಾಳ ಮುಖ ಬಯಲಿಗೆ

Subscribe to Filmibeat Kannada

ಮುಂಬೈ, ಅ.04 : ಸಮಾಜದ ಕೊಳಕನ್ನು ಬಯಲಿಗೆಳೆಯುವ 'ಕುಟುಕು ಕಾರ್ಯಾಚರಣೆ'ಯಲ್ಲಿರುವ ಹುಳುಕುಗಳನ್ನೇ ಬಯಲಿಗೆಳೆಯುವ ವಸ್ತುವಿನ ಚಿತ್ರ ಅಕ್ಟೋಬರ್ 5ರಂದು ದೇಶದಾದ್ಯಂತ ಬಿಡುಗಡೆಯಾಗುತ್ತಿದೆ.

ಅನಿಮಾ ಫಿಲಂಸ್ 'ಇಟ್ಸ್ ಬ್ರೆಕಿಂಗ್ ನ್ಯೂಸ್' ಎಂಬ ಚಿತ್ರ ತಯಾರಿಸಿದ್ದು ಸೇವಾಮನೋಭಾವ ಹೊಂದಿದ್ದ ಪತ್ರಿಕೋದ್ಯಮ ಈಗ ನಂಬಿಕಾರ್ಹತೆ ಕಳೆದುಕೊಳ್ಳುತ್ತಿದ್ದು ಕೇವಲ ವ್ಯಾಪಾರವಾಗಿ ಉಳಿದಿದೆ ಎಂಬ ವಾದವನ್ನು ಮುಂದಿಟ್ಟಿದೆ.

ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಬವಾಗಿರುವ ಪತ್ರಿಕೋದ್ಯಮ ವೃತ್ತಿಪರತೆಯನ್ನು ಕಳೆದುಕೊಳ್ಳುತ್ತ ಸುದ್ದಿಯ ಸತ್ಯಾಸತ್ಯತೆಯನ್ನು ಬದಿಗಿಟ್ಟು ಸುದ್ದಿಯನ್ನು ಹುಟ್ಟುಹಾಕುವತ್ತ ತನ್ನ ಶ್ರಮವನ್ನು ಸವಿಸುತ್ತಿದೆ ಎಂಬ ಸಂದೇಶವನ್ನು ಈ ಚಿತ್ರ ಹೊಂದಿದೆ.

ವಿದ್ಯಾ ಎಂಬ ಯುವ ಪತ್ರಕರ್ತೆ ಪತ್ರಿಕೋದ್ಯಮ ಪ್ರವೇಶಿಸಿದ ಹುಮ್ಮಸ್ಸಿನಲ್ಲಿ ಕೊಳಕು ಸಮಾಜದ ಚಕ್ರವ್ಯೂಹದಲ್ಲಿ ಸಿಲುಕಿ ಹೋರಾಡಿ ಹೊರಬರುವ ಹೊತ್ತಿಗೆ ಆ ಕೊಳಕು ಸಮಾಜದ ಅವಿಭಾಜ್ಯ ಅಂಗವೇ ಆಗಿರುತ್ತಾಳೆ ಎಂಬುದು ಚಿತ್ರದ ತಿರುಳು. ವಿಶಾಲ್ ಇನಾಂದಾರ್ ಚಿತ್ರವನ್ನು ನಿರ್ದೇಶಿಸಿದ್ದಾರೆ.

'ನಜರ್' ಚಿತ್ರದಲ್ಲಿ ಅಶ್ಮಿತ್ ಪಟೇಲ್ ಜೊತೆ ಮೈಬಿಸಿಯಾಗುವಂತೆ ಅಭಿನಯಿಸಿದ್ದ ಕೋಯೆಲ್ ಪುರಿ ಈ ಚಿತ್ರದಲ್ಲಿ ಹೆಸರುಗಳಿಸುವ ಹುಮ್ಮಸ್ಸಿನಲ್ಲಿ ಪತ್ರಿಕೋದ್ಯಮದ ನೈತಿಕತೆಯನ್ನು ಗಾಳಿಗೆ ತೂರಿ ಸುದ್ದಿ ಹುಟ್ಟುಹಾಕುವ ಪತ್ರಕರ್ತೆಯಾಗಿ ನಟಿಸಿದ್ದಾರೆ. ಉಳಿದ ತಾರಾಗಣದಲ್ಲಿ ಅಭಿಮನ್ಯು ಸಿಂಗ್, ಸ್ವಾತಿ ಸೇನ್, ಅತುಲ್ ಪರ್ಚುರೆ, ಹರ್ಷ ಛಾಯಾ ಮುಂತಾದವರು ಅಭಿನಯಿಸಿದ್ದಾರೆ.

(ಯುಎನ್ಐ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada