For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಖಳನಟ ಗೋಗಾ ಕಪೂರ್ ನಿಧನ

  By Srinath
  |

  ಮುಂಬೈ, ಮಾ. 4: ಗೋಗಾ ಕಪೂರ್ ಹೆಸರೇ ಸಾಕು ಸಿನಿಪ್ರಿಯರಿಗೆ ಭಯಾನಕ ದೃಶ್ಯ ಕಟ್ಟಿಕೊಡುತ್ತದೆ. 80 ಮತ್ತು 90 ರ ದಶಕದಲ್ಲಿ ಬಾಲಿವುಡ್ ನಲ್ಲಿ ಮಿಂಚಿದ್ದ ಅಂತಹ ಗೋಗಾ ಕಪೂರ್ ಗುರುವಾರ ನಿಧನರಾಗಿದ್ದಾರೆ. 70 ವರ್ಷದ ಗೋಗಾ ದೀರ್ಘಕಾಲದ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಅಂದಹಾಗೆ ರವೀದ್ರ ಕಪೂರ್ ಇವರ ನಿಜ ನಾಮ. ಅವರು ಪತ್ನಿ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ. ಪುತ್ರಿ ಪಾಯಲ್ ಕಪೂರ್ ಬಾಲಿವುಡ್ ನಟಿ.

  ಶಾರುಕ್ ಖಾನ್ ಅಭಿನಯದ 'ಕಭಿ ಹಾ ಕಭಿ ನಾ' ಸಿನಿಮಾದಲ್ಲಿ ಆಂಥೋಣಿ ಗೋಮ್ಸ್ ಆಗಿ ಮೆರೆದಿದ್ದ ಗೋಗಾ ನೆನಪು ಇನ್ನೂ ಹಸಿರಾಗಿಯೇ ಇದೆ. 1971ರಲ್ಲಿ 'ಜ್ವಾಲಾ'ದಲ್ಲಿ ಅಭಿನಯಿಸುವ ಮೂಲಕ ಬಾಲಿವುಡ್್ಗೆ ಎಂಟ್ರಿ ಕೊಟ್ಟ ಗೋಗಾ, ಮುಂದೆ ಬಾಲಿವುಡ್ ನಲ್ಲಿ ಕಾಯಂ ಆಗಿ ತಳವೂರಿದರು.

  ಸುಮಾರು 120 ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ಅವರ ನಟನೆಯೆಲ್ಲ ಹೆಚ್ಚಾಗಿ ಬಾಲಿವುಡ್ ಬಾದ್ ಶಾ ಅಮಿತಾಬ್ ಬಚ್ಚನ್ ಜತೆ. ಅಗ್ನಿಪಥ್ ಚಿತ್ರದಲ್ಲಿ ದಿನಕರ್ ರಾವ್ ಪಾತ್ರಕ್ಕೆ ಜೀವಕ್ಕೆ ತುಂಬಿದ್ದರು. ಇತ್ತೀಚೆಗೆ ಕಿರುತೆರೆಯಲ್ಲೂ ಕಾಣಿಸಿಕೊಂಡಿದ್ದರು. ಶಾಹೆನ್ ಶಾ, ಜಿಗರ್, ಕೂಲಿ, ಸತ್ತೆ ಪೆ ಸತ್ತಾ, ಲಾವಾರಿಸ್, ಯಾರಾನಾ, ಮೈ ಖಿಲಾಡಿ ತೂ ಅನಾರಿ, ಖಯಾಮತ್ ಸೆ ಖಯಾಮತ್ ಥಕ್ ಮುಂತಾದ ಚಿತ್ರಗಳಲ್ಲಿ ಖಳನಾಯಕನಾಗಿ ಅವರ ಅಭಿನಯ ಅದ್ಭುತವಾಗಿದೆ.

  English summary
  Popular villain of the 70’s and a very talented actor Goga Kapoor breathed his last on Thursday. He was 70. He is survived by his wife and three daughters. His daughter Payal Kapoor is also an actor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X