ಐಶ್ ಗರ್ಭದಲ್ಲಿ ಟೆಸ್ಟ್ ಟ್ಯೂಬ್ ಬೇಬಿ : ಭೈರವಿ ಟ್ವೀಟ್
ಐಶ್ವರ್ಯಾ ರೈ ಬಚ್ಚನ್ ಗರ್ಭಣಿಯಾಗಿರುವ ಸುದ್ದಿ ಸಕಲ ನ್ಯೂಸ್ ಚಾನೆಲ್ ಗಳಲ್ಲಿ ಪ್ರಮುಖ ಸುದ್ದಿಯಾಗಿ, ಚರ್ಚೆಯಾಗಿ ವಾದ ವಿವಾದಗಳಾಗುತ್ತಿದೆ. ಜೊತೆಗೆ ಬಾಲಿವುಡ್ ನ ಹೊಸ ಅಡ್ಡಾ ಟ್ವೀಟ್ಟರ್ ಲೋಕದಲ್ಲೂ ಐಶ್ ಬೇಬಿಯದೇ ಸುದ್ದಿ.
ಐಶ್ ಗರ್ಭಿಣಿಯಾದ ಸುದ್ದಿ ಹೊರಬಿದ್ದಿದ್ದೇ ಅಮಿತಾಬ್ ಟ್ವೀಟ್ ಮೂಲಕ ಎಂಬುದನ್ನು ಮರೆಯುವಂತಿಲ್ಲ. ಐಶ್ ಗೆ ಶುಭ ಹಾರೈಕೆಗಳು, ಟಿಪ್ಸ್ ಗಳು ಹೆಚ್ಚಾಗುತ್ತಿರುವಂತೆ ಭೈರವಿ ಗೋಸ್ವಾಮಿ ಎಂಬ ಸೆಕ್ಸ್ ಬಾಂಬ್ ಹೊಸದೊಂದು ಬಾಂಬ್ ಸಿಡಿಸಿದ್ದಾಳೆ.
ಅಭಿಷೇಕ್ ಹಾಗೂ ಐಶ್ವರ್ಯಾ ರೈ ಇಬ್ಬರು ಬ್ಯಾಂಕಾಕ್ ಗೆ ಹೋಗಿದ್ದಾಗ, ಐಶ್ವರ್ಯಾ IVF(In Vitro Fertilization) ಚಿಕಿತ್ಸೆಗೆ ಒಳಗಾಗಿದ್ದಾಳೆ. ಈ ಮೂಲಕ ಗಂಡು ಸಂತಾನ ಪಡೆದು ಬಚ್ಚನ್ ಕುಟುಂಬ ಬೆಳೆಸುವ ಉದ್ದೇಶ ಈಗ ಫಲ ನೀಡುತ್ತಿದೆ. ಎಂದು ಭೈರವಿ ಟ್ವೀಟ್ ಮಾಡಿದ್ದಾಳೆ. ಐವಿಎಫ್ ಬಗ್ಗೆ ಚೆನ್ನಾಗಿ ಹೇಳಬೇಕಾಗಿದ್ದಿಲ್ಲ,. ಗೂಗಲ್ ಸರ್ಚ್ ಮಾಡಿದರೆ ಸಿಗುತ್ತದೆ (ಐವಿಎಫ್ ಚಿಕಿತ್ಸೆ ಅಂದರೆ ಏನು?)
ಆದರೆ, ಐಶ್ ಐವಿಎಫ್ ಬಗ್ಗೆ ಟ್ವೀಟ್ ಮಾಡಿದ ನಂತರ ಆ ಬಗ್ಗೆ ಯಾವುದೇ ಪುರಾವೆಯಾಗಲಿ, ಹೆಚ್ಚಿನ ಮಾಹಿತಿಯಾಗಲಿ ಭೈರವಿ ನೀಡಲ್ಲ. ನಾನು ಹೇಳಿಕೆಯನ್ನು ಹಿಂಪಡೆಯುವುದಿಲ್ಲ ಹಾಗೂ ಹೆಚ್ಚಿಗೆ ಹೇಳುವ ಅವಶ್ಯಕತೆಯೂ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಟ್ವೀಟ್ಟರ್ ಕಿಂಗ್ ಬಿಗ್ ಬಿ ಏನು ಉತ್ತರ ನೀಡಿಲ್ಲ. ಹಾಗೂ ಜೂನಿಯರ್ ಬಚ್ಚನ್ ಆಗಲಿ, ಐಶ್ ಆಗಲಿ ಪ್ರತಿಕ್ರಿಯಿಸಿಲ್ಲ. ಭೈರವಿ ಹೇಳುವುದೇ ನಿಜವಾದರೆ ಯಾರ ಹಾರ್ಮೋನ್ ವೀಕ್? ಟೆಸ್ಟ್ ಟ್ಯೂಬ್ ಬೇಬಿ ಪಡೆಯುವಷ್ಟು ನಿಶ್ಯಕ್ತಿ ಯಾರಿಗಿದೆ? ಅಭಿಯಲ್ಲಿ ಏನಾದರೂ ದೋಷವುಂಟಾ ಎಂಬ ಸತ್ಯ ಹೊರಬೀಳಲಿದೆ. ಕಾದು ನೋಡೋಣ.


Click it and Unblock the Notifications











