ಹದಿನಾರರ ಬಯಕೆ ತೀರಿಸಿಕೊಂಡ ಬಿಪಾಶಾ ಬಸು
ಬಾಲಿವುಡ್ ನ ಹಾಟ್ ನಟಿ ಬಿಪಾಶಾ ಬಸು ವೈಯಕ್ತಿಕ ಸಂಬಂಧಗಳ ಸಂಕೋಲೆ ಕಳಚಿಕೊಂಡು ಅರಾಮವಾಗಿ ಸುತ್ತಾಡುತ್ತಿದ್ದಾಳೆ. ಇತ್ತೀಚೆಗೆ ತನ್ನ ಹದಿನಾರರ ಬಯಕೆಯೊಂದನ್ನು ತೀರಿಸಿಕೊಂಡಿದ್ದಾಳೆ. ತನ್ನ ಹೊಕ್ಕಳು ಚುಚ್ಚಿಸಿಕೊಂಡ ಬಿಪಾಶಾ, ತನ್ನ ಬಯಕೆ, ನೋವು, ನಲಿವು ಬಗ್ಗೆ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾಳೆ.
16 ನೇ ಹರೆಯದಲ್ಲೇ ನನಗೆ ಹೊಕ್ಕಳ ಸುತ್ತಾ ರಿಂಗ್ ಹಾಕಿಕೊಳ್ಳುವ ಬಯಕೆ ಹುಟ್ಟುಕೊಂಡಿತ್ತು. ಆದರೆ, ಭಯ ಆಗುತ್ತಿತ್ತು. ಬಹುಶಃ ಈಗ ಆ ಧೈರ್ಯ ಬಂದಿದೆ! ಸ್ವಲ್ಪ ನೋವಿದೆ. ಇನ್ನೂ 15 ದಿನ ದೈಹಿಕ ಕಸರತ್ತಿಗೆ ವಿರಾಮ. ನೋವು ಮರೆಸಲು ನೀವುಗಳು ನೀಡಿದ ಸಲಹೆ ಸೂಚನೆಗಳಿಗೆ ಥ್ಯಾಂಕ್ಸ್. ಸಾರಿ ಸದ್ಯಕ್ಕೆ ಫೋಟೋ ಹಾಕಲಾರೆ. ನೋವು ವಾಸಿಯಾದ ಮೇಲೆ ನಿಮ್ಮೊಟ್ಟಿಗೆ ಹರಟುತ್ತೇನೆ ಸದ್ಯಕ್ಕೆ ವಿರಮಿಸುತ್ತೇನೆ ಎಂದು ಟ್ವೀಟ್ ಸಂದೇಶ ಹಾಕಿದ್ದಾಳೆ ಬಿಪಾಶಾ.
ಬಹು ಕಾಲದ ಗೆಳೆಯ ಜಾನ್ ಅಬ್ರಹಾಂ ಜೊತೆ ಪ್ರೇಮ ಸಂಕೋಲೆ ಕಳಚಿಕೊಂಡ ನಂತರ ಬಿಪಾಶಾ ಬಿಂದಾಸ್ ಆಗಿ ಹೊಕ್ಕಳು ಚುಚ್ಚಿಸಿಕೊಂಡಿರುವುದು ಕೆಲವರ ಹುಬ್ಬೇರಿಸಿದೆ. ಅಭಿಮಾನಿಗಳಂತೂ ಬಿಪಾಶಾ ಹೊಕ್ಕಳ ಮಾದಕ ಚಿತ್ರ ನೋಡಲು ಕಾತುರದಿಂದ ಕಾದಿದ್ದಾರೆ.
ಜೋಶ್ ಹಾರ್ಟ್ನೆಟ್ ಜೊತೆ "ಸಿಂಗುಲಾರಿಟಿ", ಅಭಿಷೇಕ್ ಬಚ್ಚನ್ ಜೊತೆ "ಪ್ಲೇಯರ್ಸ್" ಹಾಗೂ ಸಂಜಯ್ ದತ್ ಜೊತೆ "ಮಿ ಫ್ರಾಡ್ ಚಿತ್ರಗಳು ಸದ್ಯಕ್ಕೆ ಬಿಪಾಶಾ ಕೈಲಿದೆ. ಬಿಪಾಶಾ ಟ್ವೀಟ್ ನೋಡಿ ದಿಯಾ ಮಿರ್ಜಾ ಸಕತ್ ಖುಷಿಯಿಂದ ಹಾರೈಸಿದ್ದಾರೆ. ಬಹುಶಃ ಭವಿಷ್ಯದ ನಿರ್ದೇಶಕಿ ದಿಯಾ ಮುಂದಿನ ಚಿತ್ರಕ್ಕೆ ಬಿಪಾಶಾಳನ್ನು ಸೆಳೆಯುವ ಪ್ರಯತ್ನ ಇದು ಎನ್ನಬಹುದು.


Click it and Unblock the Notifications











