For Quick Alerts
  ALLOW NOTIFICATIONS  
  For Daily Alerts

  ದೀಪಿಕಾ ಪಡುಕೋಣೆಗೆ ಹುಟ್ಟುಹಬ್ಬದ ಶುಭಾಶಯಗಳು

  |

  ದೀಪಿಕಾ ಪಡುಕೋಣೆ ಹೆಸರು ಬಾಲಿವುಡ್ ನಲ್ಲಿ ಚಿರಪರಿಚಿತ. ಮಾಡೆಲಿಂಗ್ ಮತ್ತು ಹಿಂದಿ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ದೀಪಿಕಾ ಪಡುಕೋಣೆ, ಇಂದು (ಜನವರಿ 05,) ತಮ್ಮ ಜನುಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಇವರು 1986ರ ಜನವರಿ 6 ರಂದು ಡೆನ್ಮಾರ್ಕ್ ನ ಕೋಪನ್ ಹೆಗನ್ ನಲ್ಲಿ ಜನಿಸಿದವರು.

  ದೀಪಿಕಾ 11 ತಿಂಗಳ ಶಿಶುವಾಗಿದ್ದಾಗಲೇ ಪಡುಕೋಣೆ ಕುಟುಂಬ ಬೆಂಗಳೂರಿಗೆ ಬಂದು ನೆಲೆಸಿತ್ತು. ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ದೀಪಿಕಾ, ಕನ್ನಡದ 'ಐಶ್ವರ್ಯ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದರು. ನಂತರ ಬಾಲಿವುಡ್ ಚಿತ್ರ 'ಓಂ ಶಾಂತಿ ಓಂ; ದಲ್ಲಿ ನಟಿಸಿ ಬಾಲಿವುಡ್ ನಲ್ಲಿ ನೆಲೆಗೊಂಡರು.

  ದಕ್ಷಿಣ ಭಾರತದ ಕನ್ನಡ, ತೆಲುಗು ಹಾಗೂ ತಮಿಳು ಚಿತ್ರಗಳಲ್ಲೂ ನಟಿಸಿರುವ ದೀಪಿಕಾ ಸದ್ಯಕ್ಕೆ ಬಾಲಿವುಡ್ ನಲ್ಲಿಯೇ ಸಾಕಷ್ಟು ಬ್ಯುಸಿಯಾಗಿದ್ದಾರೆ. ಇದೀಗ ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವ ಬಾಲಿವುಡ್ ಚಿತ್ರ 'ದೇಶಿ ಬಾಯ್ಸ್' ನಲ್ಲಿ ಕೂಡ ದೀಪಕಾ ಅಭಿನಯಿಸಿದ್ದಾರೆ. ದೀಪಿಕಾಗೆ ಒನ್ ಇಂಡಿಯಾ ಕನ್ನಡ ಕೋರುವ ಹುಟ್ಟುಹಬ್ಬದ ಶುಭಾಶಯಗಳು. (ಒನ್ ಇಂಡಿಯಾ ಕನ್ನಡ)

  English summary
  Actress Deepika Padukone celebrating Birthday today. Her Birth date is 05.01.1986. She acts in Bollywood movies. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X