»   » ಬ್ಯಾಂಕಾಕ್‌ನಲ್ಲಿ ಕಣ್ಣಿಗೆ ಡ್ಯಾಮೇಜ್ ಮಾಡಿಕೊಂಡ ಶ್ರದ್ಧಾ

ಬ್ಯಾಂಕಾಕ್‌ನಲ್ಲಿ ಕಣ್ಣಿಗೆ ಡ್ಯಾಮೇಜ್ ಮಾಡಿಕೊಂಡ ಶ್ರದ್ಧಾ

Posted By:
Subscribe to Filmibeat Kannada

"ಹೆಣ್ಣಿನ ಅಂದದ ಮೊಗಕೆ ಕಣ್ಣೇ ಭೂಷಣ..." ಎಂಬುದು ಹಳೆಯ ಹಾಡಾದರೂ ಇಂದಿಗೂ ಅರ್ಥಪೂರ್ಣ ಅನ್ನಿಸುತ್ತದೆ. ಆದರೆ ಅಂತಹ ಅಂದದ ಕಣ್ಣುಗಳಿಗೇ ಹಿಂದಿ ಹಾಗೂ ತೆಲುಗು ಚಿತ್ರರಂಗದ ಬೆಡಗಿ ಶ್ರದ್ಧಾ ದಾಸ್ ಡ್ಯಾಮೇಜ್ ಮಾಡಿಕೊಂಡಿದ್ದಾರೆ. ಅದೂ ದೂರದ ಬ್ಯಾಂಕಾಕ್‌ನಲ್ಲಿ.

ಬ್ಯಾಂಕಾಂಕ್‌ನಲ್ಲಿ ಆಕೆ ಅಭಿನಯಿಸುತ್ತಿರುವ ಚಿತ್ರವೊಂದರ ಚಿತ್ರೀಕರಣದಲ್ಲಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ಸಂಭವಿಸಿದ ಅಪಘಾತದಲ್ಲಿ ಆಕೆಯ ಕಣ್ಣಿಗೆ ತೀವ್ರ ಗಾಯಗಳಾಗಿವೆ. ಹೇರ್ ಬ್ಯಾಂಡ್ ಹಾಕಿಕೊಳ್ಳುತ್ತಿರಬೇಕಾದರೆ ಈ ಅವಘಡ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

ಕಣ್ಣಿನ ಕಾರ್ನಿಯಾ ಭಾಗಕ್ಕೆ ಗೀಚು ಗಾಯಗಳಾಗಿದ್ದ್ದು, ಮೂರು ದಿನ ರೆಸ್ಟ್ ತೆಗೆದುಕೊಳ್ಳುವಂತೆ ವೈದ್ಯರು ಶ್ರದ್ಧಾಗೆ ತಿಳಿಸಿದ್ದಾರೆ. "ಕಣ್ಣು ಸಿಕ್ಕಾಪಟ್ಟೆ ನೋವಾಗುತ್ತಿತ್ತು. ನೋವಿನ ಜೊತೆಗೆ ಧಾರಾಕಾರ ಕಣ್ಣೀರು. ಮೂರು ದಿನ ರೆಸ್ಟ್ ತೆಗೆದುಕೊಂಡಾಗಿದೆ. ಆದರೂ ನೋವು ಮಾತ್ರ ಇನ್ನೂ ಸ್ವಲ್ಪ ಇದೆ. ಮ್ಯಾನೇಜ್ ಮಾಡುತ್ತೇನೆ " ಎಂದಿದ್ದಾರೆ ಶ್ರದ್ಧಾ. (ಏಜೆನ್ಸೀಸ್)

English summary
Popular actress Shraddha Das injured her eye in a freak accident on the sets of her upcoming Telugu film Rey in Bangkok. Sources said that she was trying to put on a hair band when the she injured her eye accidentally. She suffered abrasions on her cornea.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada