twitter
    For Quick Alerts
    ALLOW NOTIFICATIONS  
    For Daily Alerts

    ಐಶ್ವರ್ಯಾ ಪುತ್ರಿ ಬೇಟಿ ಬಿ ಚಿತ್ರರಂಗಕ್ಕೆ ಎಂಟ್ರಿ!

    By Mahesh
    |

    Abhishek Bachchan and Aishwarya Rai
    ಬಾಲಿವುಡ್ ಗೆ ಐಶ್ವರ್ಯಾ ರೈ ರೀ ಎಂಟ್ರಿ ಸುದ್ದಿ ಇನ್ನೂ ಇರುವಾಗಲೇ, ಬಚ್ಚನ್ ಕುಟುಂಬದಿಂದ ಹೊಸದೊಂದು ಸುದ್ದಿ ಹೊರಬಿದ್ದಿದೆ. ಐಶ್ ಹಾಗೂ ಅಭಿ ಅವರ ಹಸುಗೂಸು ಬೇಟಿ ಬಿ ಈಗಾಗಲೇ ಬಾಲಿವುಡ್ ಚಿತ್ರಕ್ಕೆ ಸಹಿ ಹಾಕಿದ್ದಾಳೆ.

    ಇದು ಹೇಗೆ ಸಾಧ್ಯ ಎಂದು ಹುಬ್ಬೇರಿಸಬೇಡಿ...ರಿಯಲ್ ಆಗಿ ಇದು ಸದ್ಯಕ್ಕಂತೂ ಸಾಧ್ಯವಾಗಿಲ್ಲ. ಆದರೆ, 'ಹಮ್ ಸಬ್ ಉಮೀದ್ ಸೇ ಹೈ' ಪಾಕಿಸ್ತಾನಿ ಕಾಮಿಡಿ ಕಾರ್ಯಕ್ರಮದಲ್ಲಿ ಬಚ್ಚನ್ ಕುಟುಂಬದ ಬಗ್ಗೆ ಹಾಸ್ಯ ಮಾಡಲಾಗಿದೆ.

    ಅಭಿಷೇಕ್ ಹಾಗೂ ಐಶ್ವರ್ಯಾ ವೃದ್ಧರಾಗಿರುತ್ತಾರೆ. ಬೇಟಿ ಬಿಗೆ ಆಗ 20ರ ಹರೆಯ ಬಾಲಿವುಡ್ ಅಂಗಳಕ್ಕೆ ಸುಲಭವಾಗಿ ಎಂಟ್ರಿ ಕೊಡುತ್ತಾಳೆ. ಬಚ್ಚನ್ ಖಾನ್ ದಾನ್ ಬಗ್ಗೆ ತಿಳಿ ಹಾಸ್ಯ ರೂಪಕ ನಡೆಸಿ ಜನಮೆಚ್ಚುಗೆ ಗಳಿಸಿದೆ ಈ ಪೋಗ್ರಾಂ.

    ಮೂರೂವರೆ ತಿಂಗಳಿನ ಕೂಸು ಬೇಟಿ ಬಿಗೆ ಇನ್ನೂ ನಾಮಕರಣ ಮಾಡಿಲ್ಲ. ಹೆಸರನ್ನು ಕೂಡಾ ಬಹಿರಂಗಪಡಿಸಿಲ್ಲ. ಆದ್ರೆ, ಚಿತ್ರರಂಗದ ಎಂಟ್ರಿ ಬಗ್ಗೆ ಆಗಲೇ ಅಣಕು ಆಟ ಆರಂಭವಾಗಿದೆ. ಐಶ್ ಹಾಗೂ ಬಚ್ಚನ್ ಕುಟುಂಬದ ಬಗೆಗಿನ ಕಾಮಿಡಿಗೆ ಪಾಕಿಸ್ತಾನಿಗಳು ಮುಗಿಬೀಳುತ್ತಿದ್ದಾರಂತೆ.

    English summary
    While mommy Aishwarya Rai Bachchan is still in a merry-go-mood to enjoy her motherhood phase, surprisingly her daughter Beti B is in extreme hurry to make her Bollywood debut. Reportedly, Beti B has signed her first Bollywood film. Shocked?
    Monday, March 5, 2012, 10:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X