ಐಶೂ ಮಗು ಫೋಟೋ ಮಾರಾಟ: ಬಿಗ್ ಬಿ ಹೇಳಿಕೆ
ಐಶ್ವರ್ಯಾ ರೈ ಮಗುವಿನ ಫೋಟೋವನ್ನು ಅಮಿತಾಬ್ ಮಾರಾಟ ಮಾಡಲಿದ್ದಾರೆ. ಅದರಿಂದ ಸಾಕಷ್ಟು ಹಣವನ್ನು ಗಳಿಸಲಿದ್ದಾರೆ ಎಂಬ ವದಂತಿಯಿಂದ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಕೆರಳಿ ಕೆಂಡವಾಗಿದ್ದಾರೆ. "ಇಲ್ಲ, ಸಾಧ್ಯವೇ ಇಲ್ಲ, ನಾವು ಮಗುವಿನ ಫೋಟೋವನ್ನು ಮಾರಾಟ ಮಾಡುವ ಯಾವ ಯೋಚನೆಯನ್ನೂ ಹೊಂದಿಲ್ಲ" ಎಂದು ಹೇಳಿದ್ದಾರೆ.
ಈ ವದಂತಿಯಿಂದ ತೀವ್ರ ನೊಂದಿರುವ ಅಮಿತಾಬ್, "ಸುಳ್ಳು ಸುಳ್ಳು ಸುದ್ದಿಗಳು ಅದೆಲ್ಲಿಂದ ರೆಕ್ಕೆಕಟ್ಟಿಕೊಂಡು ಹಾರಿ ಬರುತ್ತಿವೆಯೋ ತಿಳಿಯುತ್ತಿಲ್ಲ. ಮಾಧ್ಯಮಗಳು ಈ ರೀತಿಯ ಸುದ್ದಿಗಳನ್ನು ನಂಬಬಾರದು ಹಾಗೂ ಪ್ರಸಾರ ಮಾಡಬಾರದು. ಇವೆಲ್ಲಾ ರೋಗಗ್ರಸ್ಥ ಮನಸ್ಸಿನಿಂದ ಹುಟ್ಟುವ ರೋಗಗ್ರಸ್ಥ ವಿಚಾರಗಳು" ಎಂದಿದ್ದಾರೆ.
ಒಟ್ಟಾರೆ ಈ ಹೇಳಿಕೆಯಿಂದ, ಅಮಿತಾಬ್ ತಮ್ಮ ಮೊಮ್ಮಗಳ ಫೋಟೋವನ್ನು ಮಾರಾಟ ಮಾಡುವ ಯೋಚನೆ ಹೊಂದಿಲ್ಲ ಎಂಬುದು ಸ್ಪಷ್ಟವಾಗಿದೆ. ಅಮಿತಾಬ್ ಬಚ್ಚನ್ ಪರಿವಾರವನ್ನು ಕಂಡರಾಗದವರು ಈ ರೀತಿಯ ಸುದ್ದುಗಳನ್ನು ಹುಟ್ಟುಹಾಕಿ ತಮಾಷೆ ತೆಗೆದುಕೊಳ್ಳುತ್ತಿದ್ದಾರೆ ಅನ್ನುತ್ತಿವೆ ಬಾಲಿವುಡ್ ಮೂಲಗಳು. (ಏಜೆನ್ಸೀಸ್)
More from Filmibeat
English summary
Amitabh Bachchan denied all the rumors of selling Aishwarya Rai daughter pictures. They wont sell any such picture of Beti B to the media.


Click it and Unblock the Notifications











