ರೆಡ್ಡಿ ಮನೆಯಲ್ಲಿ ಸಿಕ್ಕಿದ್ದಕ್ಕಿಂತಲೂ ಹೆಚ್ಚಿಗೆ ಬಾಚಿದ ಬಾಡಿಗಾರ್ಡ್
ಬಳ್ಳಾರಿ ರೆಡ್ಡಿ ನಿವಾಸಗಳ ಮೇಲೆ ಸಿಬಿಐ ದಾಳಿ ನಡೆಸಿದಾಗ ಸಿಕ್ಕಿದ ನಗನಾಣ್ಯಕ್ಕಿಂತಲೂ ಹೆಚ್ಚಾಗಿ ಸಲ್ಮಾನ್ ಖಾನ್ ಅಭಿನಯದ ಬಾಡಿಗಾರ್ಡ್ ಚಿತ್ರ ಬಾಚಿದೆ. ಸಲ್ಲು ಜೊತೆ ಕರೀನಾ ಕಪೂರ್ ಅಭಿನಯದ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಾಕ್ಸಾಫೀಸಲ್ಲಿ ಮಾತ್ರ ಡಿಂಕಟಕ ಡಿಂಕಟಕ ಎಂದು ಡಾನ್ಸ್ ಮಾಡಿದೆ.
ಚಿತ್ರ ತೆರೆಕಂಡ ನಾಲ್ಕೇ ದಿನಗಳಲ್ಲಿ ರು.86 ಕೋಟಿ ಬಾಚಿದೆ. ಇದು ಭಾರತದ ಬಾಕ್ಸಾಫೀಸ್ ಗಳಿಕೆ ಮಾತ್ರ. ಇನ್ನು ವಿದೇಶದಗಳಿಕೆ ಲೆಕ್ಕಕ್ಕೆ ತೆಗೆದುಕೊಂಡರೆ ಉಳಿದ ರಾಜಕಾರಣಿಗಳ ಲೆಕ್ಕದೊಂದಿಗೆ ಇದನ್ನು ಹೋಲಿಸಬೇಕಾಗುತ್ತದೆ! 'ದಬಾಂಗ್' ಹಾಗೂ 'ತ್ರಿ ಈಡಿಯಟ್ಸ್' ಚಿತ್ರಗಳಿಗಿಂತಲೂ 'ಬಾಡಿಗಾರ್ಡ್' ಚಿತ್ರಕ್ಕೆ ಹೆಚ್ಚಿನ ಹಣವನ್ನು ಗಳಿಸಿರುವುದು ವಿಶೇಷ.
'ದಬಾಂಗ್' ಚಿತ್ರ ರು.81 ಕೋಟಿ ಗಳಿಸುವ ಹೊತ್ತಿಗೆ ಬಾಕ್ಸಾಫೀಸರಲ್ಲಿ ಅಂಗಾತ ಮಲಗಿಬಿಡ್ತು. ಇನ್ನು 'ತ್ರಿ ಈಡಿಯಟ್ಸ್' ಚಿತ್ರದ ಮೊದಲ ವಾರದ ಗಳಿಕೆ ರು.80 ಕೋಟಿ. 'ಬಾಡಿಗಾರ್ಡ್' ಚಿತ್ರವನ್ನು ರು. 60 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗಿತ್ತು. ಈ ಚಿತ್ರ ಈಗ ಬಾಕ್ಸಾಫೀಸಲ್ಲಿ ಪೈಸಾ ವಸೂಲ್ ಮಾಡಿದೆ. (ಏಜೆನ್ಸೀಸ್)


Click it and Unblock the Notifications











