ರಜನಿಯಿಂದ ನಿರೀಕ್ಷೆ ಹೆಚ್ಚಿದ ರಾ ಒನ್: ಶಾರುಖ್ ಖಾನ್

ಮಗಳು ಸೌಂದರ್ಯಾಳೊಂದಿಗೆ ಮುಂಬೈಗೆ ಚಿತ್ರೀಕರಣಕ್ಕಾಗಿ ರಜನಿ ಬಂದಿದ್ದು ಅವರ ಹಾಗೂ ಮಗಳ ವೃತ್ತಪರತೆಯನ್ನು ತಾವು ಹೆಚ್ಚು ಮೆಚ್ಚಿಕೊಂಡಿದ್ದಾಗಿ ಹೇಳಿರುವ ಶಾರುಖ್, ಅದಕ್ಕಾಗಿ ತಾವು ಅವರಿಗೆ ಕೃತಜ್ಞತೆ ಸಲ್ಲಿಸುತ್ತಿರುವುದಾಗಿಯೂ ತಿಳಿಸಿದ್ದಾರೆ. ಚಿತ್ರದಲ್ಲಿ ನಾಯಕಿ ಕರೀನಾ ಹಾಗೂ ಮಗನನ್ನು ಉಳಿಸುವ ದೃಶ್ಯದಲ್ಲಿ ಪ್ರವೇಶಿಸಲಿರುವ ರಜನಿ, ಅತ್ಯಂತ ಕುತೂಹಲಕರವಾಗಿರುವ ಪಾತ್ರದಲ್ಲಿ ಮಿಂಚಿದ್ದಾರೆಂಬ ಗುಟ್ಟು ರಟ್ಟು ಮಾಡಿದ್ದಾರೆ.
ಶಾರುಖ್ ಖಾನ್, ಕರೀನಾ ಹಾಗೂ ರಜನಿಕಾಂತ್ ತಾರಾಗಣದ ಬಹುನಿರೀಕ್ಷೆಯ ಈ ಚಿತ್ರ ಇದೇ ದೀಪಾವಳಿಗೆ ತೆರೆಕಾಣಲಿದೆ. ಬಿಡುಗಡೆಗಿಂತ ಮೊದಲೇ ಸಾಕಷ್ಟು ಸದ್ದು-ಸುದ್ದಿಯಲ್ಲಿರುವ ಈ ಚಿತ್ರ ಬಿಡುಗಡೆಯ ನಂತರ ದಾಖಲೆ ಸ್ಥಾಪಿಸಲಿದೆ ಎನ್ನುತ್ತಿದ್ದಾರೆ ಬಾಲಿವುಡ್ ಬಾಕ್ಸಾಫೀಸ್ ಪಂಡಿತರು. ಈಗ ರಜನಿ ಎಂಟ್ರಿ ಈ ಚಿತ್ರಕ್ಕೆ ಇನ್ನಷ್ಟು ಕೋಡು ಮೂಡಿಸಿ ನಿರೀಕ್ಷೆ ಹೆಚ್ಚಿಸಿದೆ. ಬರುವ ವರೆಗೆ ಕಾಯೋಣ, ಬಂದಾಗ ತಡಮಾಡದೇ ನೋಡೋಣ...
More from Filmibeat
English summary
South Indian superstar Rajinikanth has played a robot-named Chitti in the multilingual movie Endiraan and impressed the viewers with his daredevil stunts. The Tamil actor is once again reprising the same role for Shahrukh Khan's science-fiction film Ra.One. Accompanied by his daughter Soundarya, Rajini Saar flew to Mumbai on Sunday to shoot for his cameo in the much-anticipated movie.


Click it and Unblock the Notifications











