ಎಂಎಂಎಸ್‌ಗೆ ಬೆಂಬಲ; ಇಕ್ಕಟ್ಟಿನಲ್ಲಿ ನಿರ್ದೇಶಕ ವರ್ಮ

ರಾಮ್ ಗೋಪಾಲ್ ವರ್ಮ ಹೀಗೆ ಹೇಳಿದ್ದೇ ತಡ ಭಾರತೀಯ ಜನತಾ ಯುವ ಮೋರ್ಚ (BJYM) ಅವರಿಗೆಜೀವ ಬೆದರಿಕೆ ಒಡ್ಡಿತು. ಈ ಸಂಬಂಧ ವರ್ಮ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಬಿಜೆಪಿ ಯುವ ಮೋರ್ಚ ವಿರುದ್ಧ ದೂರು ಸಲ್ಲಿಸಿದ್ದಾರೆ.
"ಈಗಷ್ಟೆ ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದೇನೆ. ಮಾರಿಯಾ ಸುಸೈರಾಜ್ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಯುವ ಮೋರ್ಚ ತಮಗೆ ಜೀವ ಬೆದರಿಕೆಯೊಡ್ಡಿತ್ತು. " ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವರ್ಮಾ ಪೋಸ್ಟ್ ಮಾಡಿದ್ದಾರೆ.
ಕೆಲವೊಂದು ಸಂಘಟನೆಗಳು ತಮ್ಮ ವಿರುದ್ಧ ಜೀವ ಬೆದರಿಕೆಯೊಡ್ಡಿರುವುದು ಮಾಧ್ಯಮಗಳಿಂದ ಗೊತ್ತಾಯಿತು. ಆದರೆ ಬಿಜೆಪಿ ಪಕ್ಷ ಪತ್ರ ಬರೆದು ನೇರವಾಗಿ ನಮ್ಮ ಕಚೇರಿಗೆ ತಲುಪಿಸಿದೆ. ಹಾಗಾಗಿ ದೂರು ಕೊಟ್ಟಿದ್ದೇನೆ ಎಂದಿದ್ದಾರೆ ವರ್ಮ. ತಮ್ಮ ಚಿತ್ರಕ್ಕೆ ವರ್ಮಾ "ನಾಟ್ ಎ ಲವ್ ಸ್ಟೋರಿ" ಎಂದು ಹೆಸರಿಟ್ಟಿರುವುದು ಗೊತ್ತೆ ಇದೆ. (ಏಜೆನ್ಸೀಸ್)
English summary
Ram Gopal Verma (RGV) claimed that BJP's youth wing BJYM has threatened to attack him over his movie offer to Maria Susairaj who is convicted in Neeraj Grover murder case.


Click it and Unblock the Notifications