twitter
    For Quick Alerts
    ALLOW NOTIFICATIONS  
    For Daily Alerts

    ಎಂಎಂಎಸ್‌ಗೆ ಬೆಂಬಲ; ಇಕ್ಕಟ್ಟಿನಲ್ಲಿ ನಿರ್ದೇಶಕ ವರ್ಮ

    By Rajendra
    |

    Ram Gopal verma lands in trouble
    ಕನ್ನಡ ಸಿನಿಮಾ ತಾರೆ ಮಾರಿಯಾ ಮೋನಿಕಾ ಸುಸೈರಾಜ್ (ಎಂಎಂಎಸ್) ಮರ್ಡರ್ ಕೇಸ್‌ನಿಂದ ಖುಲಾಸೆ ಆಗಿದ್ದೇ ತಡ ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮ ಸೆಡೆದು ನಿಂತರು. ಮಾರಿಯಾ ಅವರ ಜೀವನ ಕತೆ ಆಧಾರಿತ ಚಿತ್ರ ತೆಗೆಯುವುದಾಗಿ ಘೋಷಿಸಿದರು. ಮಾರಿಯಾರನ್ನೇ ತಮ್ಮ ಚಿತ್ರದಲ್ಲಿ ಬಳಸಿಕೊಳ್ಳುವುದಾಗಿಯೂ ಹೇಳಿದರು.

    ರಾಮ್ ಗೋಪಾಲ್ ವರ್ಮ ಹೀಗೆ ಹೇಳಿದ್ದೇ ತಡ ಭಾರತೀಯ ಜನತಾ ಯುವ ಮೋರ್ಚ (BJYM) ಅವರಿಗೆಜೀವ ಬೆದರಿಕೆ ಒಡ್ಡಿತು. ಈ ಸಂಬಂಧ ವರ್ಮ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಬಿಜೆಪಿ ಯುವ ಮೋರ್ಚ ವಿರುದ್ಧ ದೂರು ಸಲ್ಲಿಸಿದ್ದಾರೆ.

    "ಈಗಷ್ಟೆ ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದೇನೆ. ಮಾರಿಯಾ ಸುಸೈರಾಜ್ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಯುವ ಮೋರ್ಚ ತಮಗೆ ಜೀವ ಬೆದರಿಕೆಯೊಡ್ಡಿತ್ತು. " ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವರ್ಮಾ ಪೋಸ್ಟ್ ಮಾಡಿದ್ದಾರೆ.

    ಕೆಲವೊಂದು ಸಂಘಟನೆಗಳು ತಮ್ಮ ವಿರುದ್ಧ ಜೀವ ಬೆದರಿಕೆಯೊಡ್ಡಿರುವುದು ಮಾಧ್ಯಮಗಳಿಂದ ಗೊತ್ತಾಯಿತು. ಆದರೆ ಬಿಜೆಪಿ ಪಕ್ಷ ಪತ್ರ ಬರೆದು ನೇರವಾಗಿ ನಮ್ಮ ಕಚೇರಿಗೆ ತಲುಪಿಸಿದೆ. ಹಾಗಾಗಿ ದೂರು ಕೊಟ್ಟಿದ್ದೇನೆ ಎಂದಿದ್ದಾರೆ ವರ್ಮ. ತಮ್ಮ ಚಿತ್ರಕ್ಕೆ ವರ್ಮಾ "ನಾಟ್ ಎ ಲವ್ ಸ್ಟೋರಿ" ಎಂದು ಹೆಸರಿಟ್ಟಿರುವುದು ಗೊತ್ತೆ ಇದೆ. (ಏಜೆನ್ಸೀಸ್)

    English summary
    Ram Gopal Verma (RGV) claimed that BJP's youth wing BJYM has threatened to attack him over his movie offer to Maria Susairaj who is convicted in Neeraj Grover murder case.
    Tuesday, July 5, 2011, 17:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X