ಕರೀನಾ ಕಪೂರ್ ಜೊತೆ ಶಾರುಖ್ ತುಟಿ ತುಟಿ ಚುಂಬನ
ರೊಮ್ಯಾಂಟಿಕ್ ಹೀರೋ ಶಾರುಖ್ ಖಾನ್ ತಮ್ಮ ವೃತ್ತಿ ಜೀವನದಲ್ಲಿ ಬಹಳಷ್ಟು ಪಾತ್ರಗಳನ್ನು ಪೋಷಿಸಿದ್ದಾರೆ. ಆದರೆ ನಾಯಕಿಯರ ಜೊತೆ ಮಾತ್ರ ತುಟಿಗೆ ತುಟಿ ಬೆರೆಸಿಲ್ಲ. ಆದರೆ ಈಗ ಅದಕ್ಕೂ ಕಾಲ ಕೂಡಿಬಂದಿದ್ದು, ಬಾಲಿವುಡ್‌ನ ಬೆಡಗಿ ಕರೀನಾ ಕಪೂರ್ ಜೊತೆ ತುಟಿಗೆ ತುಟಿ ಒತ್ತಲು ಸಿದ್ಧರಾಗಿದ್ದಾರೆ. 'ರಾ.ಒನ್' ಚಿತ್ರಕ್ಕಾಗಿ ಈ ರೊಮ್ಯಾಂಟಿಕ್ ಚುಂಬನ ಪಾತ್ರಕ್ಕೆ ಓಕೆ ಎಂದಿದ್ದಾರೆ ಎನ್ನುತ್ತವೆ ಮೂಲಗಳು.
'ರಾ.ಒನ್' ಚಿತ್ರದ ಪ್ರಣಯಭರಿತ ಹಾಡಿನಲ್ಲಿ ತುಟಿಗೆ ತುಟಿ ಬೆರೆಸುವ ಹಾಟ್ ದೃಶ್ಯವಿದೆಯಂತೆ. ಈ ಚುಂಬನ ತುಂಬಾ ಸ್ಟ್ರಾಂಗ್ ಆಗಿರುತ್ತದೆ. ಈ ಚುಂಬನ ದೃಶ್ಯದ ಬಗ್ಗೆ ಸಾಕಷ್ಟು ಚರ್ಚೆ ನಡೆಸಿದ ಬಳಿಕವೇ ಇಬ್ಬರೂ ತುಟಿಗೆ ತುಟಿ ಒತ್ತಿದ್ದಾರೆ ಎನ್ನುತ್ತವೆ ಮೂಲಗಳು. ಆದರೆ ಇನ್ನೂ ಕೆಲವು ಮೂಲಗಳು, ಶಾರುಕ್ ಚುಂಬನ ದೃಶ್ಯಗಳಿಗೆ ಬಾಯ್ ಬಾಯ್ ಹೇಳಿಯಾಗಿದೆ. ಈ ಚಿತ್ರದಲ್ಲಿ ಚುಂಬನವೂ ಇಲ್ಲ ಎಂಥದೂ ಇಲ್ಲ. ಇದೆಲ್ಲಾ ಬರಿ ಓಳು ಎಂದಿವೆ.
ಚುಂಬನ ದೃಶ್ಯಗಳಲ್ಲಿ ನಟಿಸಲ್ಲ ಎಂದು ಶಾರುಖ್ ಪ್ರಮಾಣ ಮಾಡಿಯಾಗಿದೆ. ಈ ಶಪಥವನ್ನು ಅವರು ಮುರಿಯುವ ಸಾಧ್ಯತೆಗಳು ಕಮ್ಮಿ ಎಂದಿದ್ದಾನೆ ಶಾರುಖ್ ಅವರ ಆಪ್ತಮಿತ್ರನೊಬ್ಬ. ಇರಲಿ ಈ ಚಿತ್ರ ದೀಪಾವಳಿಗೆ ತೆರೆಗೆ ಬರುತ್ತಿದೆ. ಆಗ ಚುಂಬನದ ಸತ್ಯಾಸತ್ಯತೆಗಳು ಹೊರಬೀಳಲೇಬೇಕು. ಅಲ್ಲಿಯವರೆಗೂ ವೇಟ್ ಅಂಡ್ ವಾಚ್.


Click it and Unblock the Notifications











