ಅಭಿಮಾನಿಗಳಿಗೆ ಶಾಕ್ ಕೊಟ್ಟ ಶಿಲ್ಪಾ ಶೆಟ್ಟಿ ಲುಕ್!

By Rajendra

ತಮ್ಮ ವಿಭಿನ್ನ ಲುಕ್ ಮೂಲಕ ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. 'ದಿ ಡಿಸೈರ್' ಚಿತ್ರದಲ್ಲಿ ಶಿಲ್ಪಾ ಕೇಶ ಮುಂಡನ ಗೆಟಪ್ ಕಂಡು ಆಕೆಯ ಅಭಿಮಾನಿಗಳು ಅವರೇನಾ ಇವರು ಎಂಬ ಕಣ್ಣುಜ್ಜಿಕೊಂಡು ನೋಡುವಂತಾಗಿದೆ. ಕೆಲವರಂತೂ ಛೇ ಎಲ್ಲದರೂ ಉಂಟಾ ಎಂಬ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ.

ಚಿತ್ರದಲ್ಲಿ ಕಾಣಿಸುವಂತೆ ನಿಜವಾಗಿಯೂ ಶಿಲ್ಪಾ ತಲೆಬೋಳಿಸಿಕೊಂಡಿಲ್ಲ. ತಲೆ ಬೋಳಿಸಿಕೊಂಡಂತೆ ಮೇಕಪ್ ಮಾಡಿದ್ದಾರೆ ಅಷ್ಟೆ. ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದವರು ಆರ್ ಶರತ್. ಚಿತ್ರದ ಪಾತ್ರ ವರ್ಗದಲ್ಲಿ ಅನುಪಮ್ ಖೇರ್, ಜಯಪ್ರದಾ, ವಿಕ್ರಂ ಗೋಖಲೆ ಮುಂತಾದವರಿದ್ದಾರೆ. ಇದೊಂದು ಇಂಡೋ ಚೀನಾ ಜಂಟಿ ನಿರ್ಮಾಣದ ಚಿತ್ರ.

'ದಿ ಡಿಸೈರ್' ಚಿತ್ರ ನ್ಯೂಯಾರ್ಕ್ ಸಿಟಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2011ಕ್ಕೆ ಆಯ್ಕೆಯಾಗಿದ್ದು, ಆಗಸ್ಟ್ 24ರಂದು ಪ್ರದರ್ಶಿಸಲಾಗುತ್ತಿದೆ. ಈ ಚಿತ್ರವನ್ನು ಕೇರಳ, ಗುಜರಾತ್, ಮಹಾರಾಷ್ಟ್ರ ಹಾಗೂ ಆಂಧ್ರ ಪ್ರದೇಶದಲ್ಲಿ ಚಿತ್ರೀಕರಿಸಲಾಗಿದೆ. (ಏಜೆನ್ಸೀಸ್)

More from Filmibeat

English summary
Actress Shilpa Shetty is all set to shock her fans with her upcoming film The Desire. The actress has gone bald for the film, however it should be noted that the actress has not actually shaven her hear for the role but has used make-up to get the desired bald look.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X