ವಿದ್ಯಾಬಾಲನ್ ಗುಟ್ಟು ರಟ್ಟಾಗಿಸಿದ ಕರಣ್ ಜೋಹರ್

ಮಲೆಯಾಳಿ ಹುಡುಗಿ, ಬಾಲಿವುಡ್ ಬೆಡಗಿ ವಿದ್ಯಾ ಬಾಲನ್ ಈಗ ಭಾರತಕ್ಕೇ ಸೆನ್ಸೇಷನ್. ಇದೀಗ ಬಿಡುಗಡೆಯಾಗಿ ಯಶಸ್ವೀ ಪ್ರದರ್ಶನ ಕಾಣುತ್ತಿರುವ ಬಾಲಿವುಡ್ ಚಿತ್ರ 'ದಿ ಡರ್ಟಿ ಪಿಕ್ಚರ್' ವಿದ್ಯಾ ಬಾಲನ್ ವೃತ್ತಿ ಜೀವನಕ್ಕೊಂದು ಮೈಲೀಗಲ್ಲಾಗಲಿದೆ. ಈ ಚಿತ್ರದಲ್ಲಿ ವಿದ್ಯಾ, ಮಾದಕ ನಟಿ ಸಿಲ್ಕ್ ಸ್ಮಿತಾ ಅವವ ನಿಜಜೀವನವನ್ನು ಆಧರಿಸಿದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇಮ್ರಾನ್ ಹಶ್ಮಿ, ನಾಸೀರುದ್ದೀನ್ ಷಾ, ತುಷಾರ್ ಕಪೂರ್ ಈ ಚಿತ್ರದಲ್ಲಿ ವಿದ್ಯಾ ಬಾಲನ್ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ. ಆದರೆ ಕೇಂದ್ರ ಬಿಂದುವಾಗಿರುವ ವಿದ್ಯಾ ಬಾಲನ್ ಅಭಿನಯ ಎಲ್ಲರನ್ನೂ ಮೀರಿ ಮನೆಮಾತಾಗಿದೆ. ವಿದ್ಯಾ ಮಾದಕ ಮೈಮಾಟ ಹಾಗೂ ಪಾತ್ರವೇ ಆಗಿ ಮೆರೆದಿದ್ದು ಬಾಲಿವುಡ್ ನಲ್ಲಿ ವಿದ್ಯಾರ ಹೊಸ ಅಲೆ ಸೃಷ್ಟಿಗೆ ಕಾರಣವಾಗಿದೆ.

ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಬೇರೆ ನಟಿಯರಿಗೆ ಕಿವಿಮಾತು ಹೇಳಿದ್ದಾರೆ. "ಒಂದು ಪಾತ್ರಕ್ಕೆ ಹೇಗೆ ತನ್ನನ್ನು ಸಮರ್ಪಿಸಿಕೊಳ್ಳಬೇಕು, ಹೇಗೆ ತನ್ನ ಪೂರ್ಣ ಗಮನವನ್ನು, ಚೈತನ್ಯವನ್ನು ತುಂಬಬೇಕು ಎಂಬ ಪಾಠವನ್ನು ಮುಖ್ಯ ವಾಹಿನಿಯಲ್ಲಿ ಇರುವ ಪ್ರತಿ ಕಲಾವಿದೆಯೂ ವಿದ್ಯಾ ಬಾಲನ್ ಅವರಿಂದ ಕಲಿತುಕೊಳ್ಳಬೇಕು." ಹೀಗೆಂದು ಹೇಳಿರುವ ಕರಣ್ ಜೋಹರ್ ಮಾತು 'ದಿ ಡರ್ಟಿ ಪಿಕ್ಚರ್' ಚಿತ್ರ ನೋಡಿದವರೆಲ್ಲರ ಅನುಭವ ಎನ್ನುವಂತಾಗಿದೆ. (ಏಜೆನ್ಸೀಸ್)

More from Filmibeat

English summary
Director Karan Johar admires actress Vidya Balan's performance in the movie 'The Dirty Picture."
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X