ಶ್ರೀಮತಿಯಾಗಲಿದ್ದಾರೆ ತಾರೆ ಸೆಲೀನಾ ಜೇಟ್ಲಿ
ಕಾಬೂಲ್ ಸುಂದರಿ ಸೆಲೀನಾ ಜೇಟ್ಲಿಗೆ ಕಂಕಣಬಲ ಕೂಡಿಬಂದಿದ್ದು ಶೀಘ್ರದಲ್ಲೇ ಶ್ರೀಮತಿಯಾಗಲಿದ್ದಾರೆ. ದುಬೈ ಮೂಲಕ ಹೋಟೆಲ್ ಉದ್ಯಮಿ ಪೀಟರ್ ಹಾಗ್ ಅವರನ್ನು ಜೇಟ್ಲಿ ವರಿಸಲಿದ್ದಾರೆ. ತೀರಾ ಇತ್ತೀಚೆಗೆ ಇವರಿಬ್ಬರ ನಿಶ್ಚಿತಾರ್ಥ ಮುಂಬೈನಲ್ಲಿ ನಡೆದಿದೆ.
ಕಳೆದ ಹತ್ತು ತಿಂಗಳಿಂದ ಸೆಲೀನಾ ಮತ್ತು ಪೀಟರ್ ಡೇಟಿಂಗ್‌ನಲ್ಲಿ ಒಬ್ಬರನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರಂತೆ. ಈಗ ಮದುವೆ ಮುಂದಾಗಿದ್ದು ಮನೆಯವರನ್ನೂ ಒಪ್ಪಿಸಿದ್ದಾರಂತೆ. ಈಗಾಗಲೆ ಸೆಲೀನಾ ಮದುವೆ ನಡೆದೇ ಹೋಗಿದೆ ಎಂದು ಯಾರೋ ಸುದ್ದಿ ಹಬ್ಬಿಸಿ ಇನ್ನೇನು ಸಿಹಿ ಹಂಚಿವುದೊಂದು ಬಾಕಿ ಇತ್ತು. ಅಷ್ಟರಲ್ಲಿ ಸೆಲೀನಾ ತಮಗಿನ್ನೂ ಮದುವೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದರು.
"ಕದ್ದುಮುಚ್ಚಿ ಅಲ್ಲದೆ ಎಲ್ಲರಿಗೂ ತಿಳಿಸಿಯೇ ಮದುವೆಯಾಗುತ್ತೇನೆ. ಸದ್ಯಕ್ಕೆ ನನ್ನ ಕೈಯಲ್ಲಿ ಸಾಕಷ್ಟು ಚಿತ್ರಗಳಿವೆ. ಅವೆಲ್ಲಾ ಮುಗಿದ ಬಳಿಕವಷ್ಟೆ ಗಟ್ಟಿಮೇಳ" ಎನ್ನುತ್ತಿದ್ದಾರೆ ಸೆಲೀನಾ. ಅಂದಹಾಗೆ ಸೆಲೀನಾ ಕನ್ನಡದ 'ಶ್ರೀಮತಿ' ಚಿತ್ರದಲ್ಲಿ ಅಭಿನಯಿಸಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಮುಖ್ಯಭೂಮಿಕೆಯಲ್ಲಿರುವ ಚಿತ್ರ ಇದಾಗಿದೆ. [ಸೆಲೀನಾ ಜೇಟ್ಲಿ]


Click it and Unblock the Notifications











