ಅಮೀರ್ ಖಾನ್ ಮೇಲೆ ಕಾರು ಕಂಪನಿ ಗರಂ

By Rajendra

ಅಮೀರ್ ಖಾನ್ ನಿರ್ಮಾಣದ 'ಡೆಲ್ಲಿ ಬೆಲ್ಲಿ' ಚಿತ್ರ ಬಾಕ್ಸಾಫೀಸಲ್ಲಿ ಡಂಕಣಕ್ಕ ಡಂಕಣಕ್ಕ ಎಂದು ಡಾನ್ಸ್ ಮಾಡುತ್ತಿದೆ. ಇದೇ ಖುಷಿಯಲ್ಲಿರುವ ಅಮೀರ್ ಹೊಸ ವಿವಾದ ಎದುರಾಗಿದೆ. ಅಮೀರ್ ಖಾನ್ ಕಾನೂನು ತೊಡಕಿನಲ್ಲಿ ಸಿಕ್ಕಿಬಿದ್ದಾರೆ. ಕಾರು ಕಂಪನಿಯೊಂದು ಅಮೀರ್ ವಿರುದ್ಧ ಕೇಸು ಗುಜರಾಯಿಸಲು ಮುಂದಾಗಿದೆ.

'ಡೆಲ್ಲಿ ಬೆಲ್ಲಿ' ಚಿತ್ರದಲ್ಲಿ ಕಾರೊಂದರ ಬಗೆಗಿನ ಡೈಲಾಗ್ ಹೀಗಿದೆ. "ಈ ಕಾರು ನೋಡಲು ತುಂಬಾ ಕೆಟ್ಟದಾಗಿದೆ. ಕತ್ತೆಯೊಂದು ರಿಕ್ಷಾಗೆ ಹಿಂದಿನಿಂದ ಇಕ್ಕಿದರೆ ಹೇಗಿರುತ್ತದೋ ಹಾಗಿದೆ" ಎಂಬರ್ಥದ ಡೈಲಾಗ್ ಕಾರು ಕಂಪನಿಯ ಪಿತ್ತ ನೆತ್ತಿಗೇರುವಂತೆ ಮಾಡಿದೆ.ಆ ಕಾರು ಬೇರಾವುದೂ ಅಲ್ಲ ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್‌ಗೆ ಸೇರಿದ್ದು ಎನ್ನಲಾಗಿದೆ.

ಚಿತ್ರದಲ್ಲಿ ತೋರಿಸಿರುವ ಕಾರು ಸ್ಯಾಂಟ್ರೋ ಕಾರು ಎಂಬುದು ವಿಶೇಷ.ಈಗ ಕಂಪನಿ ಅದೇ ಕಾರೋ ಅಲ್ಲವೋ ಎಂದು ಮತ್ತೊಮ್ಮೆ ಕನ್ಫರ್ಮ್ ಮಾಡಿಕೊಂಡು ಅಮೀರ್ ವಿರುದ್ಧ ದಾವಾ ಹೂಡಲು ನಿರ್ಧರಿಸಿದೆ. ವಿಶೇಷಗಳಲ್ಲಿ ವಿಶೇಷ ಎಂದರೆ ಸ್ಯಾಂಟ್ರೋ ಜಿಂಗ್ ಕಾರಿನ ರಾಯಭಾರಿ ಶಾರುಖ್ ಖಾನ್ ಎಂಬುದು. (ಏಜೆನ್ಸೀಸ್)

More from Filmibeat

English summary
Delhi Belly may be rocking at the box office but it has landed up in a controversy. Sources said that a car company is planning to take legal action against Aamir Khan for the derogatory remarks on its car in Delhi Belly.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X