ಕಡೆಗೂ ರಹಸ್ಯವಾಗಿಯೇ ಉಳಿದ ದಿವ್ಯಾ ಭಾರತಿ ಸಾವು

ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರಿಗೂ ಆಕೆಯ ಸಾವಿನ ಬಗ್ಗೆ ನಿಖರ ಮಾಹಿತಿ ಸಿಗಲಿಲ್ಲ. ಕಡೆಗೆ ಆಕೆಯ ಸಾವಿನ ರಹಸ್ಯವನ್ನು ಭೇದಿಸಲು ವಿಫಲರಾಗಿ ಫೈಲನ್ನು 1998ರಲ್ಲಿ ಕ್ಲೋಸ್ ಮಾಡಲಾಯಿತು. ದಿವ್ಯಾ ಅವರ ಸಾವು ಇಂದಿಗೂ ಮಿಸ್ಟರಿಯಾಗಿಯೇ ಉಳಿದುಹೋಯಿತು.
ಆಕೆ ದುರಂತ ಸಾವಿಗೀಡಾದ ದಿನವೇ ಆಕೆಯ ಅಂತ್ಯಕ್ರಿಯೆಯೂ ನೆರವೇರಿತು. ಅನಿಲ್ ಕಪೂರ್, ಗೋವಿಂದ, ರಾಜ್ ಬಬ್ಬನ್, ಯಶ್ ಚೋಪ್ರಾ, ಚಿರಂಜೀವಿ, ಕರೀಷ್ಮಾ ಕಪೂರ್, ಸಂಗೀತಾ ಬಿಜಲಾನಿ, ತಬು, ಮನೀಷಾ ಕೋಯಿರಾಲಾ ಮುಂತಾದವರು ಮುಂದೆ ನಿಂತು ದಿವ್ಯಾ ಅಂತ್ಯಕ್ರಿಯೆ ನೆರವೇರಿಸಿದ್ದರು.
ಆಕೆ ದುರಂತ ಸಾವಪ್ಪಿದಾಗ ನಿರ್ಮಾಣ ಹಂತದಲ್ಲಿದ್ದ 14 ಹಿಂದಿ ಚಿತ್ರಗಳಿದ್ದವು. ಕೆಲವು ಚಿತ್ರಗಳನ್ನು ದಿವ್ಯಾ ಸಾವಪ್ಪಿದ ಮೇಲೆ ಕೈಬಿಡಲಾಗಿತ್ತು. ಇನ್ನೂ ಕೆಲವನ್ನು ಮತ್ತೊಬ್ಬ ನಾಯಕಿಯರೊಂದಿಗೆ ಚಿತ್ರಿಸಲಾಯಿತು. ಇದಿಷ್ಟು ದಿವ್ಯಾ ಭಾರತಿ ಬಗೆಗಿನ ಸಂಕ್ಷಿಪ್ತ ವಿವರಗಳು. (ಒನ್‌ಇಂಡಿಯಾ ಕನ್ನಡ)
More from Filmibeat
English summary
Actress Divya Bharti appeared in more than 14 Hindi films between 1992 and 1993. Her career was cut short by her death on 5 April 1993, when she fell from her apartment building. The investigation into the circumstances of her death was closed in 1998.


Click it and Unblock the Notifications











