ಬಾಕ್ಸ್ ಆಫೀಸ್ ಗಳಿಕೆಯಲ್ಲಿ ದಾಖಲೆಯತ್ತ ಡಾನ್ 2
ಇತ್ತೀಚಿಗೆ ಬಿಡುಗಡೆಯಾಗಿರುವ ಬಾಲಿವುಡ್ ಚಿತ್ರ 'ಡಾನ್ 2' ಬಾಕ್ಸ್ ಆಫೀಸ್ ನಲ್ಲಿ ಜಯಭೇರಿ ಭಾರಿಸಿದೆ. ಎರಡನೇ ವಾರಕ್ಕೆ ಕಾಲಿಟ್ಟಿರುವ ಈ ಚಿತ್ರ, ಇದೀಗ ರು. ನೂರು ಕೋಟಿ ಗಳಿಕೆ ದಾಟಿ ದಾಖಲೆ ಸಂಗ್ರಹದತ್ತ ಮುನ್ನುಗ್ಗಿದೆ. ಮೊದಲ ವಾರದಲ್ಲಿಯೇ ರು. 75.51 ಗಳಿಸಿ ಸಾಕಷ್ಟು ಮುಂದಿದ್ದ ಚಿತ್ರ, ಎರಡನೇ ವಾರದ ಹೊತ್ತಿಗೆ ಯಾವ ಪ್ರತಿಸ್ಪರ್ಧಿಗಳಿಲ್ಲದೇ ನಿರಾತಂಕವಾಗಿದೆ.
'ಕ್ಯಾ ಯಹೀ ಸಚ್ ಹೈ' ಚಿತ್ರ ಮಾತ್ರ ಈ ವಾರ ಬಿಡುಗಡೆಯಾಗಿದ್ದು ಅದು ಡಾನ್ 2 ಗೆ ಸ್ಪರ್ಧೆ ನಿಡುವಂತಿಲ್ಲ. ಹಾಗಾಗಿ ಡಾನ್ 2 ಬಾಕ್ಸ್ ಆಫೀಸ್ ಡಾನ್ ಆಗಿ ಮೆರೆಯುತ್ತಿದೆ. ಸದ್ಯದ ವರದಿಯಂತೆ ಡಾನ್ 2 ಒಟ್ಟೂ ಗಳಿಕೆ ರು. 103.24. ಅದರಲ್ಲಿ ಹಿಂದಿ ಆವೃತ್ತಿಯ ಗಳಿಕೆ ರು. 100.12 ಆಗಿದ್ದರೆ ತಮಿಳು ರು. 1.30 ಮತ್ತು ತೆಲುಗು ರು. 1.82 ಸೇರಿದೆ.
ಡಾನ್ 2 ಗಳಿಕೆ ಓಟ ಹೀಗೆ ಮುಂದುವರಿದರೆ ಬಾಕ್ಸ್ ಆಫೀಸ್ ಕಿಂಗ್ ಎನಿಸಿಕೊಳ್ಳಲಿದೆ. ರಾ ಒನ್ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಶಾರುಖ್ ಖಾನ್ ಗೆ ಇಂಥದೊಂದು 'ಹಿಟ್' ಅತ್ಯಗತ್ಯವಿತ್ತು. ಈಗ ಶಾರುಖ್ ಬಾಲಿವುಡ್ ಬಾದಶಾಹ ಆಗಿ ಮೊದಲಿನಂತೆ ನಿರಾಳ. (ಏಜೆನ್ಸೀಸ್)


Click it and Unblock the Notifications











