ರೂಪದರ್ಶಿ ಪೂನಂ ಪಾಂಡೆಗೆ ಕಿಡ್ನಿ ಕಲ್ಲಿನ ಶಸ್ತ್ರಚಿಕಿತ್ಸೆ
ಏನೇನೋ ಕನಸು ಕಂಡಿದ್ದ ರೂಪದರ್ಶಿ ಪೂನಂ ಪಾಂಡೆಗೆ ಪಾಪ ಹೀಗಾಗಬಾರದಿತ್ತು. ಭಾರತ ವಿಶ್ವಕಪ್ ಗೆದ್ದರೆ ಬೆತ್ತಲಾಗಿ ತಂಡದಲ್ಲಿ ಹೊಸ ಸ್ಫೂರ್ತಿ ತುಂಬುವುದಾಗಿ ಪೂನಂ ಹೇಳಿದ್ದರು. ದುರಂತ ಎಂದರೆ ಆಕೆಯ ಕನಸು ಮತ್ತೊಂದು ವಿಧದಲ್ಲಿ ನನಸಾಗಿದೆ. ಕಿಡ್ನಿ ಕಲ್ಲಿನ ಶಸ್ತ್ರ ಚಿಕಿತ್ಸೆಗಾಗಿ ಆಕೆ ಆಸ್ಪತ್ರೆಯಲ್ಲಿ ಬೆತ್ತಲಾಗಿದ್ದಾರೆ.
ಹೊಟ್ಟೆಯಲ್ಲಿ ಅಸಾಧ್ಯ ನೋವಿನ ಕಾರಣ ಸೋಮವಾರ(ಏ.4) ರಾತ್ರಿ ಆಕೆ ಆಸ್ಪತ್ರೆಗೆ ದಾಖಲಾಗಿದ್ದರು. ಆಕೆಯನ್ನು ಪರೀಕ್ಷಿಸಿದ ವೈದ್ಯರು ಕಿಡ್ನಿಯಲ್ಲಿ ಕಲ್ಲು ಇರುವುದಾಗಿ ಹೇಳಿದರು. ಬಳಿಕ ಆಕೆಗೆ ಶಸ್ತ್ರಚಿಕಿತ್ಸೆಯನ್ನು ಮಾಡಿ ಕಿಡ್ನಿ ಕಲ್ಲುಗಳನ್ನು ಹೊರತೆಗೆದಿದ್ದಾರೆ. ಮಂಗಳವಾರ ರಾತ್ರಿ ಆಕೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾಗಿಆಕೆಯ ಪತ್ರಿಕಾ ಪ್ರಚಾರಕ ವಿವರ ನೀಡಿದ್ದಾನೆ.
ಬಳಿಕ ಚೇತರಿಸಿಕೊಂಡ ಆಕೆ ಟ್ವಿಟ್ಟರ್‌ನಲ್ಲೂ ತನ್ನ ಚಿಕಿತ್ಸೆ ಬಗ್ಗೆ ಬರೆದುಕೊಂಡಿದ್ದಾರೆ. ಈಗಲೂ ತಾವು ತಮ್ಮ ಮಾತಿಗೆ (ಬೆತ್ತಲಾಗುವ)ಬದ್ಧರಾಗಿರುವುದಾಗಿಯೂ ಒತ್ತಿ ಹೇಳಿದ್ದಾರೆ. ಅಂದಹಾಗೆ ಆಕೆ ಬರೆದಿರುವ ಸುದೀರ್ಘ ಪತ್ರಕ್ಕೆ ಬಿಸಿಸಿಐನಿಂದ ಇದುವರೆಗೂ ಯಾವುದೇ ಉತ್ತರ ಬಂದಿಲ್ಲ. ಉತ್ತರಕ್ಕಾಗಿ ಇನ್ನೂ ಪೂನಂ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ ಎಂದು ಆಕೆಯ ಪರ ವಕೀಲ ಪ್ರಶಾಂತ್ ಉಚಿಲ್ ತಿಳಿಸಿದ್ದಾರೆ.


Click it and Unblock the Notifications











