ಕಂದನ ನಿರೀಕ್ಷೆಯಲ್ಲಿ ರಾಹುಲ್ ಮಹಾಜನ್ ಪತ್ನಿ

By Rajendra

ಎನ್‌ಡಿಟಿವಿ ಇಮ್ಯಾಜಿನ್‌‌ನ ರಿಯಾಲಿಟಿ ಶೋ 'ಸ್ವಯಂವರ' (ಸೀಸನ್ 2) ಮೂಲಕ ದಾಂಪತ್ಯ ಜೀವನಕ್ಕೆ ಅಡಿಯಿಟ್ಟ ರಾಹುಲ್ ಮಹಾಜನ್ ಹಾಗೂ ಡಿಂಪಿ ಕಂದನ ನಿರೀಕ್ಷೆಯಲ್ಲಿದ್ದಾರೆ. ಡಿಂಪಿ ಮಹಾಜನ್ ಈಗ ಗರ್ಭಿಣಿ ಎಂಬ ಅಂಶ ಬಾಲಿವುಡ್‌ನಲ್ಲಿ ಬಹಿರಂಗವಾಗಿದೆ.

ಮುಂಬೈನ ಸುಸಜ್ಜಿತ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಇತ್ತೀಚೆಗೆ ಈ ದಂಪತಿಗಳು ಭೇಟಿ ನೀಡಿ ಪರೀಕ್ಷಿಸಿಕೊಂಡಿದ್ದಾರೆ. ರಾಹುಲ್ ಪತ್ನಿ ಡಿಂಪಿ ಗರ್ಭಿಣಿ ಎಂಬುದು ವೈದ್ಯರ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಈ ವಿಷಯ ಬಾಲಿವುಡ್ ಕಿವಿಗಳಿಗೆ ಅದು ಹೇಗೋ ಬಿದ್ದಿದೆ.

ಸುದ್ದಿ ಆ ಕಿವಿಯಿಂದ ಈ ಕಿವಿಗೆ ಹರಿದಾಡಿ ಕಡೆಗೆ ಜಗಜ್ಜಾಹೀರಾಗಿದೆ. ಈ ದಂಪತಿಗಳ ಫೇಸ್‌‍ಬುಕ್‌ನಲ್ಲಿ ಈಗ ಅಭಿಮಾನಿಗಳ ಶುಭಾಶಯಗಳ ಸುರಿಮಳೆಯೇ ಆಗುತ್ತಿದೆ. ಇವರಿಬ್ಬರೂ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಅಪ್ಪನಾಗುವ ಸಂತಸದಲ್ಲಿ ರಾಹುಲ್ ಮೈಮರೆತಿದ್ದಾನೆ. (ಏಜೆನ್ಸೀಸ್)

More from Filmibeat

English summary
Rahul Mahajan and wife Dimpy Mahajan, who got united through NDTV Imagine TV's reality show Swayamvar's (Season 2) Rahul Dulhaniya Le Jaayega are reported to be expecting their first child. The rumour going around is that Dimpy Mahajan is pregnant.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X