ಸಲ್ಮಾನ್ ಖಾನ್‌ಗೆ ಇನ್ನೂ ಯಾಕೆ ಮದುವೆಯಾಗಿಲ್ಲ?
ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ(40) ಮದುವೆ ವಯಸ್ಸು ಮೀರುತ್ತಿದ್ದರೂ ಇನ್ನೂ ಯಾಕೆ ಮದುವೆಯಾಗಿಲ್ಲ. ಇನ್ನೂ ಯಾಕೆ ಒಂಟಿ ಪಿಶಾಚಿಯಾಗಿ ಇದ್ದಾರೆ?ಎಂಬ ಯಕ್ಷ ಪ್ರಶ್ನೆಗಳಿಗೆ ಸಲ್ಲು ತಂದೆ ಸಲೀಂ ಖಾನ್ ಉತ್ತರಿಸಿದ್ದಾರೆ. ಹಾಗೆಯೇ ಕತ್ರಿನಾ ಕೈಫ್‌ರನ್ನು ಸಲ್ಲು ಮದುವೆಯಾಗುವುದು ಅನುಮಾನ ಎಂದಿದ್ದಾರೆ.
ಸಲ್ಮಾನ್ ಖಾನ್ ಒಂಥರಾ ವಿಚಿತ್ರ ಸ್ವಭಾವದವನು. ಹುಡುಗಿಯರು ಅವನ ಕಡೆಗೆ ಸಹಜವಾಗಿಯೇ ಆಕರ್ಷಿತರಾಗುತ್ತಾರೆ. ಹುಡುಗಿಯರ ಜೊತೆ ಅವನ ಸ್ನೇಹ ಸಂಬಂಧ ಒಂಚೂರು ಬೆಳೆದರೂ ಸಾಕು, ಅವನು ಅವರಲ್ಲಿ ತನ್ನ ತಾಯಿಯನ್ನು ಕಾಣುತ್ತಾನೆ. ಹಾಗಾಗಿ ಅವನು ಮದುವೆಯಾಗಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ ಸಲೀಂ ಖಾನ್.
ಸಿನಿಮಾ ನಟಿಯೊಬ್ಬಳನ್ನು ಮದುವೆಯಾದರೆ ಅಡುಗೆ ಮಾಡುವುದು, ಬಟ್ಟೆ ಒಗೆಯುವುದು, ಮಕ್ಕಳನ್ನು ನೋಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದ ಮೊದಲೆ ಬಿಜಿ ಬಿಜಿಯಾಗಿರುವ ಸಲ್ಲು ಜೀವನ ಗಜಿಬಿಜಿಯಾಗುತ್ತದೆ. ಚಿತ್ರರಂಗದ ಹೊರತಾಗಿ ಬೇರೊಬ್ಬರನ್ನು ಹುಡುಕಬೇಕಾಗಿದೆ. ಹಾಗಾಗಿ ಅವನಿಗೆ ತಕ್ಕ ಜೋಡಿ ಹುಡುಕುವುದು ತಡವಾಗುತ್ತಿದೆ ಎಂದಿದ್ದಾರೆ ಸಲೀಂ.


Click it and Unblock the Notifications











