ಸಲ್ಮಾನ್ ಖಾನ್ ಮನೆಯಲ್ಲಿ ರಾಹುಲ್ ಭೂರಿ ಭೋಜನ!

By Rajendra

ಬಾಲಿವುಡ್ ನಟ ಸಲ್ಮಾನ್ ಖಾನ್ ಏನಾದರೂ ರಾಜಕೀಯ ಸೇರುತ್ತಾರಾ? ಯಾರಿಗೆ ಗೊತ್ತು. ಚಿತ್ರರಂಗ ಬೇಸರವಾಗಿ ಒಂದಿನ ಸೇರಲು ಸೇರಬಹುದೇನೋ. ಆದರೆ ಸದ್ಯಕ್ಕಂತೂ ಸಲ್ಲು ರಾಜಕೀಯ ಸೊಲ್ಲೆತ್ತುತ್ತಿಲ್ಲ. ವಿಷಯ ಇಷ್ಟೆ, ಮೊನ್ನೆ ಕಾಂಗ್ರೆಸ್‌ನ ಯುವ ಮುಖಂಡ ರಾಹುಲ್ ಗಾಂಧಿ ಅವರು ಸಲ್ಲು ಅವರನ್ನು ಭೇಟಿಯಾಗಿದ್ದಾರೆ. ಆದರೆ ಯಾವುದೇ ರಾಜಕೀಯ ಉದ್ದೇಶದಿಂದ ಅಲ್ಲ. ಅದು ಕೇವಲ ಸೌಹಾರ್ದಯುತ ಭೇಟಿ ಅಷ್ಟೆ.

ಭಾರತ ಮತ್ತು ಶ್ರೀಲಂಕಾ ನಡುವಿನ ಫೈನಲ್ ಪಂದ್ಯ ನೋಡಿದ ಬಳಿಕ ರಾಹುಲ್ ಸೀದಾ ಮುಂಬೈಬಾಂದ್ರಾದ ಸಲ್ಲು ಮನೆಗೆ ಭೇಟಿ ನೀಡಿದ್ದಾರೆ. ತನ್ನ ನಾಲ್ಕು ಮಂದಿ ಗೆಳೆಯರೊಂದಿಗೆ ಅಂದು ರಾತ್ರಿ ಸಲ್ಲು ಮನೆಯಲ್ಲಿ ಭರ್ಜರಿ ಊಟ ಮಾಡಿದ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.

ಸಲ್ಲು ಮನೆಗೆ ರಾಹುಲ್ ಭೇಟಿ ನೀಡಲು ಕಾರಣರಾಗಿದ್ದು ಆತನ ಗೆಳೆಯನೊಬ್ಬ. ಆತನಿಗೆ ಸಲ್ಲು ಎಂದರೆ ಪಂಚಪ್ರಾಣವಂತೆ. ಸಲ್ಲು ಮನೆಗೆ ತನ್ನನ್ನು ಕರೆದೊಯ್ಯುವಂತೆ ಬಹಳ ದಿನಗಳಿಂದ ಆತ ರಾಹುಲ್‌ಗೆ ದುಂಬಾಲು ಬಿದ್ದಿದ್ದನಂತೆ. ಹಾಗಾಗಿ ರಾಹುಲ್ ಆತನನ್ನು ಸಲ್ಲು ಮನೆಗೆ ಕರೆದೊಯ್ದು ತನ್ನ ಗೆಳೆಯನ ಆಸೆ ಈಡೇರಿಸಿದ್ದಾನಂತೆ.

ತನ್ನ ಗೆಳೆಯರೊಂದಿಗೆ ಸಲ್ಲು ಮನೆಗೆ ರಾಹುಲ್ ಬಂದಾಗ ಮಧ್ಯರಾತ್ರಿ ಮೀರಿತ್ತು. ಸಲ್ಲು ಮನೆಗೆ ರಾತ್ರಿ 2 ಗಂಟೆಗೆ ಬಂದ ಯುವ ಪಡೆ ಮುಂಜಾನೆ 6 ಗಂಟೆಗೆ ಜಾಗ ಖಾಲಿ ಮಾಡಿತು ಎನ್ನುತ್ತವೆ ಮೂಲಗಳು. ಬಾಂದ್ರಾದ ಗೆಲಾಕ್ಸಿ ಅಪಾರ್ಟ್‌ಮೆಂಟ್‌ನಲ್ಲಿ ಎಲ್ಲರೂ ಒಟ್ಟಿಗೆ ಕೂತು ಸಲ್ಲು ಮನೆಯ ಭೋಜನ ಸವಿದಿದ್ದಾರೆ. ಒಟ್ಟಾರೆಯಾಗಿ ಸಲ್ಲುಗೆ ಗೆಳೆಯ ಬಿಗ್ ಪಟ್ಟಿಗೆ ಮತ್ತೊಬ್ಬರ ಸೇರ್ಪಡೆಯಾಗಿದೆ.

More from Filmibeat

English summary
Bollywood actor Salman Khan met Congress leader Rahul Gandhi at his Bandra residence last weekend. Rahul, along with his four friends, visited the actor's house for dinner after watching India beat Sri Lanka at the ICC Cricket World Cup final.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X