ಪ್ರಿಯಾಂಕಾ ಆಳ್ವ ಜೊತೆಗೆ ವಿವೇಕ್ ಹುಟ್ಟುಹಬ್ಬ ಸಂಭ್ರಮ

By Rajendra

ತನ್ನ ಭಾವಿ ಪತ್ನಿ, ಕನ್ನಡತಿ ಪ್ರಿಯಾಂಕಾ ಆಳ್ವ ಜೊತೆಗೆ ಬಾಲಿವುಡ್ ನಟ ವಿವೇಕ್ ಒಬೆರಾಯ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಸಂಭ್ರಮಿಸಿದ್ದಾರೆ. ವಿವೇಕ್ 34ನೇ ವರ್ಷಕ್ಕೆ ಅಡಿಯಿಟ್ಟಿದ್ದು ಪ್ರಿಯಾಂಕಾ ಆಳ್ವ ಜೊತೆ ಅದ್ಭುತ ಹಾಗೂ ಮರೆಯಲಾಗದತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ತಮ್ಮ ಹುಟ್ಟುಹಬ್ಬ ಸಂಭ್ರಮವನ್ನು ಟ್ವೀಟ್ ಮಾಡಿರುವ ವಿವೇಕ್ ಹೀಗೆ ಹೇಳಿದ್ದಾರೆ. "ನನ್ನ ಅಭಿಮಾನಿಗಳು, ಗೆಳೆಯರು ಹಾಗೂ ಕುಟುಂಬದವರ ಜೊತೆ ನನ್ನ ಹುಟ್ಟುಹಬ್ಬನ್ನು ಆಚರಿಸಿಕೊಂಡೆ. ನನ್ನ ಭಾವಿ ಪತ್ನಿ ಪ್ರಿಯಾಂಕಾ ಆಳ್ವ ಅವರ ಸಹಾಯ, ಸಹಕಾರವಿಲ್ಲದಿದ್ದರೆ ಹುಟ್ಟುಹಬ್ಬನ್ನು ಇಷ್ಟೊಂದು ಅಚ್ಚುಕಟ್ಟಾಗಿ ಆಚರಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ " ಎಂದಿದ್ದಾರೆ.

ವಿವೇಕ್ ಒಬೆರಾಯ್ ಮತ್ತು ಪ್ರಿಯಾಂಕಾ ಆಳ್ವ ಅವರ ಮದುವೆ ಈಗಾಗಲೆ ನಿಶ್ಚಯವಾಗಿದೆ. ಅಕ್ಟೋಬರ್ 29ಕ್ಕೆ ಇವರಿಬ್ಬರೂ ಸಪ್ತಪದಿ ತುಳಿಯುತ್ತಿದ್ದಾರೆ. ಬೆಂಗಳೂರು ನಿವಾಸಿಯಾದ ಪ್ರಿಯಾಂಕಾ ಓದಿದ್ದು ಲಂಡನ್‌ನಲ್ಲಿ. ಕಲೆಗಾಗಿ ಕಲಾವಿದರ ಸಂಘ (Artistes Foundation for Arts) ಎಂಬ ಸರ್ಕಾರೇತರ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜೆಡಿ(ಯು) ಮುಖಂಡ ದಿವಂಗತ ಜೀವರಾಜ್ ಆಳ್ವ ಹಾಗೂ ನಂದಿನಿ ಆಳ್ವ ಅವರ ಪುತ್ರಿ ಪ್ರಿಯಾಂಕಾ ಆಳ್ವ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X