ರೆಡ್ ಲೈಟ್ ಏರಿಯಾದಲ್ಲಿ ನಟ ಅಮೀರ್ ಖಾನ್
ಬಾಲಿವುಡ್ ನಟ ಅಮೀರ್ ಖಾನ್ ಜಗತ್ ಪ್ರಸಿದ್ಧ ಮುಂಬೈನ ವೇಶ್ಯಾ ವಾಟಿಕೆ ತಾಣ ರೆಡ್ ಲೈಟ್ ಏರಿಯಾದಲ್ಲಿ ಕಾಣಿಸಿಕೊಂಡಿದ್ದಾರೆ! ಇದರಲ್ಲಿ ಆಶ್ಚರ್ಯ ಪಡುವಂತಹದ್ದೇನು ಇಲ್ಲ. ಇನ್ನೂ ಹೆಸರಿಡದ ಹೊಸ ಚಿತ್ರದ ಚಿತ್ರೀಕರಣಕ್ಕಾಗಿ ಅವರು ರೆಡ್ ಲೈಡ್ ಏರಿಯಾಗೆ ಭೇಟಿ ನೀಡಿದ್ದರು.
ಈ ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವವರು ರೀಮಾ ಕಾಗ್‌ತಿ. ಚಿತ್ರ ನೈಜವಾಗಿ ಮೂಡಿಬರಲು ರೆಡ್ ಲೈಟ್ ಏರಿಯಾವನ್ನು ಆಯ್ಕೆ ಮಾಡಿಕೊಂಡಿದ್ದಾಗಿ ನಿರ್ದೇಶಕರು ತಿಳಿಸಿದ್ದಾರೆ. ಈ ಚಿತ್ರದಲ್ಲಿ ರಾಣಿ ಮುಖರ್ಜಿ ಮತ್ತು ಕರೀನಾ ಕಪೂರ್ ಲೈಂಗಿಕ ಕಾರ್ಯಕರ್ತೆಯರಾಗಿ ಕಾಣಿಸಲಿದ್ದಾರೆ.
ಈ ಹಿಂದೆ ಇವರಿಬ್ಬರೂ ಇದೇ ರೀತಿಯ ಪಾತ್ರವನ್ನು 'ಚಮೇಲಿ' ಮತ್ತು 'ಸಾವರಿಯಾ' ಚಿತ್ರಗಳಲ್ಲಿ ಮಾಡಿದ್ದರು. ಈಗ ಮತ್ತೊಮ್ಮೆ ಅಂಥಹದ್ದೇ ಪಾತ್ರ ಅವರನ್ನು ಹುಡುಕಿಕೊಂಡು ಬಂದಿದೆ. ರೆಡ್ ಲೈಟ್ ಏರಿಯಾದಲ್ಲೇ ಚಿತ್ರೀಕರಣ ನಡೆಸಿದರೆ ಚಿತ್ರಹೆಚ್ಚು ಅರ್ಥಪೂರ್ಣವಾಗಿ ಮೂಡಿಬರುತ್ತದೆ ಎಂದು ಸಲಹೆ ಕೊಟ್ಟವರೇ ಅಮೀರ್ ಅಂತೆ. [ಕರೀನಾ ಕಪೂರ್]
More from Filmibeat
English summary
Mr Perfectionist Aamir Khan new film shot in red-light area. The movie is directing by Reema Kagti. the two leading ladies Rani Mukherjee and Kareena Kapoor, one has apparently been cast as a sex worker in the movie.
ಅಮೀರ್ ಖಾನ್ ಕರೀನಾ ಕಪೂರ್ ರಾಣಿ ಮುಖರ್ಜಿ ರೆಡ್ ಲೈಟ್ ಏರಿಯಾ ಬಾಲಿವುಡ್ aamir khan rani mukherjee kareena kapoor bollywood


Click it and Unblock the Notifications











