ಕಿರುತೆರೆಗೂ ಲಗ್ಗೆಯಿಟ್ಟ ಮಸ್ತ್ ಮಸ್ತ್ ಹುಡುಗಿ ರವೀನಾ

ಆದರೆ ಒಂದೊಂದೇ ಕಾರ್ಯಕ್ರಮ ಮಾಡುತ್ತಿದ್ದಂತೆ ನನ್ನ ಪರಿಣಿತಿ ಹೆಚ್ಚಿಸಿಕೊಂಡು ಇದನ್ನು ನಿಭಾಯಿಸಲಿದ್ದೇನೆ. ಈ ಕಾರ್ಯಕ್ರಮದಲ್ಲಿ ತಾರೆಯರ ಬದುಕಿನ ಇನ್ನೊಂದು ಮುಖವನ್ನು ಪರಿಚಯಿಸಲಾಗುತ್ತದೆ. ಅವರ ಸಾಮಾನ್ಯ ಜೀವನದ ಪರಿಚಯವನ್ನು ನೋಡುಗರಿಗೆ ಮಾಡಿಕೊಡಲಾಗುತ್ತದೆ. ಇದರಲ್ಲಿ ಮಾನವೀಯ ಸ್ಪರ್ಶವೂ ಇರುತ್ತದೆ. ಹೀಗಾಗಿಯೇ ಈ ಕಾರ್ಯಕ್ರಮ ನಡೆಸಿಕೊಡಲು ತೀರ್ಮಾನಿಸಿದ್ದೇನೆ" ಎಂದು ಹೇಳಿದ್ದಾರೆ ರವೀನಾ ಟಂಡನ್.
ಅಂದಹಾಗೆ ಈ ರವೀನಾ ಟಂಡನ್ ಕನ್ನಡ ಸಿನಿಪ್ರೇಕ್ಷಕರಿಗೂ ಬಹಳಷ್ಟು ಪರಿಚಿತರು. ಕಾರಣ ಸೂಪರ್ ಸ್ಟಾರ್ ಉಪೇಂದ್ರರ 'ಉಪೇಂದ್ರ' ಚಿತ್ರದಲ್ಲಿ ಈಕೆ ನಟಿಸಿದ್ದಾರೆ. ಆ ಚಿತ್ರದಲ್ಲಿ 'ಮಸ್ತ್ ಮಸ್ತ್ ಹುಡುಗಿ ಬಂದ್ಲು' ಎಂಬ ಹಾಡಿಗೆ ಸೊಂಟ ಬಳುಕಿಸಿ ಕುಣಿದು, ಹದಿಹರೆಯದ ಹುಡುಗರ ನಿದ್ದೆ ಕೆಡಿಸಿದ್ದಾಕೆ ಈ ರವೀನಾ. ಇದೀಗ ಬಹಳ ವರ್ಷಗಳ ನಂತರ ಅದೇ ರವೀನಾರನ್ನು ಮತ್ತೆ ಕಿರುತೆರೆ ಹಾಗೂ ಹಿರಿತೆರೆಗಳಲ್ಲಿ ನೋಡುವ ಭಾಗ್ಯ ಪ್ರೇಕ್ಷಕರ ಪಾಲಿಗೆ ಬಂದಿದೆ. (ಒನ್ ಇಂಡಿಯಾ ಕನ್ನಡ)
English summary
Bollywood Actress Raveena Tandan is to Host TV Show called 'Isi Ka Naam Hai Jindagi'. It will telecasts in NDTV.


Click it and Unblock the Notifications