ರವೀನಾ ಮತ್ತೆ ಬರುತ್ತಿದ್ದಾರೆ, ದಯವಿಟ್ಟು ದಾರಿಬಿಡಿ

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಲಿರುವ 'ಇಸಿ ಕಾ ನಾಮ್ ಹೈ ಜಿಂದಗಿ' ಎಂಬ ಕಾರ್ಯಕ್ರಮ ನಡೆಸಿಕೊಡಲು ಒಪ್ಪಿರುವ ರವೀನಾ ಟಂಡನ್ ಅವರಿಗೆ ಇದು ಮೊದಲ ಕಿರಿತೆರೆ ಪ್ರವೇಶ. ಎರಡು ಮಕ್ಕಳ ತಾಯಿಯಾಗಿ ಇದೀಗ ಕಿರಿತೆರೆ ಕಾರ್ಯಕ್ರಮ ನೀಡಲು ಒಪ್ಪಿದ್ದಲ್ಲದೇ, ಶೋಭನಾ 7 ನೈಟ್ಸ್' ಹಾಗೂ 'ಗಿನ್ ಲಿಯಾ ಆಸ್ಮಾನ್' ಎಂಬ ಸಿನಿಮಾದಲ್ಲಿ ಕೂಡ ನಟಿಸುತ್ತಿದ್ದಾರೆ ರವೀನಾ.
ಖಾಸಗಿ ವಾಹಿನಿ ಎನ್ ಡಿ ಟಿವಿಯಲ್ಲಿ ಪ್ರಸಾರವಾಗುಲಿರುವ ಈ ಕಾರ್ಯಕ್ರಮಕ್ಕೆ ಈಗಾಗಲೇ ನಟಿ ವಿದ್ಯಾ ಬಾಲನ್ ಹಾಗೂ ಅವರ ಕುಟುಂಬವನ್ನು ಮಾತನಾಡಿಸಿರುವ ರವೀನಾಗೆ ಇದೀಗ ಸ್ವಲ್ಪ ಆತ್ಮವಿಶ್ವಾಸ ಹೆಚ್ಚಿದೆಯಂತೆ. "ಈ ಶೋನಲ್ಲಿ ಬರುವ ಬಹುತೇಕ ತಾರೆಯರು ನನ್ನ ಸ್ನೇಹಿತರೇ ಆಗಿರುವುದರಿಂದ ನನಗೆ ಸ್ವಲ್ಪ ರಿಲೀಫ್" ಎಂದಿದ್ದಾರೆ ರವೀನಾ ಟಂಡನ್. ಮುಂದಿನ ಪುಟ ನೋಡಿ...
English summary
Bollywood Actress Raveena Tandon is to Host TV Show called 'Isi Ka Naam Hai Jindagi'. It will telecasts in NDTV.


Click it and Unblock the Notifications