ಮಕ್ಕಳಿಗೆ ಶಾಲಾ ವಾಹನ ಕೊಡಿಸಿದ ಹೃತಿಕ್ ರೋಷನ್

By Rajendra

ಸಿನಿಮಾ ತಾರೆಗಳು ಏನೇನೋ ದಾನ ಮಾಡುವುದನ್ನು ನೋಡಿದ್ದೇವೆ, ಓದಿದ್ದೇವೆ. ಆದರೆ ಶಾಲಾ ವಾಹನವೊಂದನ್ನು ದಾನ ಕೊಟ್ಟ ಸುದ್ದಿ ಗೊತ್ತಾ? ಬಾಲಿವುಡ್ ನಟ ಹೃತಿಕ್ ರೋಷನ್ ಈ ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದಾರೆ. ಶಾಲಾ ಮಕ್ಕಳಿಗೆ ರು.10 ಲಕ್ಷ ಮೌಲ್ಯದ ಶಾಲಾ ವಾಹನವೊಂದನ್ನು ದಾನವಾಗಿ ಕೊಟ್ಟಿದ್ದಾರೆ. ಅದರಲ್ಲೂ ಮಾನಸಿಕ ವಿಕಲಚೇತನರ ಶಾಲೆಗೆ ಎಂಬುದು ಗಮನಾರ್ಹ ಅಂಶ.

ಮುಂಬೈನ ಜುಹು ಪ್ರದೇಶದಲ್ಲಿರುವ ದಿಲ್‌ಖುಷ್ ವಿಶೇಷ ಶಾಲೆಯಲ್ಲಿ (ಮಾನಸಿಕ ವಿಕಲಚೇತನರ ಶಾಲೆ) ಇರುವುದು ಕೇವಲ ಎರಡೇ ಎರಡು ಬಸ್ಸುಗಳು. ಅದರಲ್ಲೂ ಒಂದು ಬಸ್ ಡಕೋಟ ಎಕ್ಸ್‌ಪ್ರೆಸ್ ಆದರೆ ಇನ್ನೊಂದು ಬಸ್ ತಕ್ಕಮಟ್ಟಿಗೆ ಸುಸ್ಥಿಯಲ್ಲಿದೆ. ಈಗ ಹೃತಿಕ್ ಕೊಟ್ಟಿರುವ ಹೊಸ ಬಸ್ ಜನವರಿ ತಿಂಗಳಲ್ಲಿ ಶಾಲಾ ಮಕ್ಕಳ ಸೇವೆಗೆ ಸಜ್ಜಾಗಲಿದೆ.

ತಮ್ಮ ಶಾಲೆಗೆ ನೆರವಾಗಿ ಎಂದು ಶಾಲಾ ಸಿಬ್ಬಂದಿ ಹೃತಿಕ್‌ರನ್ನು ಕೇಳಿದ್ದರಂತೆ. ಹಾಗೆ ಕೇಳಿದ ಕೆಲವೇ ದಿನಗಳಲ್ಲಿ ಬಸ್ ಒಂದನ್ನು ದಾನವಾಗಿ ನೀಡುತ್ತಿರುವುದಾಗಿ ಹೃತಿತ್ ಘೋಷಿಸಿದ್ದಾರೆ. ಇನ್ನೇನು ಹೊಸ ವರ್ಷಕ್ಕೆ ಹೊಸ ಬಸ್ಸು ನಮ್ಮ ಶಾಲೆಯ ಮುಂದೆ ಬಂದು ನಿಲ್ಲಲಿದೆ ಎಂದು ದಿಲ್‌ಖುಷ್ ಶಾಲೆಯ ಮಕ್ಕಳು ಸಖತ್ ಖುಷಿಯಾಗಿದ್ದಾರೆ.

More from Filmibeat

English summary
Bollywood star Hrithik Roshan has donated a school bus worth RS 10 lakh to the Dilkhush Special School (for mentally challenged children) in Juhu, Mumbai. Some of the staff from the school are big fans of the actor. "We would have loved it if Hrithik personally came to hand over the bus to us.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X