»   »  ಮಮ್ಮುಟ್ಟಿಗೆ ಬೆವರಿಳಿಸಿದ ಅಮೆರಿಕಾ ಅಧಿಕಾರಿಗಳು

ಮಮ್ಮುಟ್ಟಿಗೆ ಬೆವರಿಳಿಸಿದ ಅಮೆರಿಕಾ ಅಧಿಕಾರಿಗಳು

Subscribe to Filmibeat Kannada
Mammootty 'questioned' at New York airport
ಮಲಯಾಳಂ ಚಿತ್ರರಂಗದ ಖ್ಯಾತ ನಟ ಮಮ್ಮುಟ್ಟಿ ಅವರನ್ನು ಮುಸ್ಲಿಂ ಎಂಬ ಕಾರಣಕ್ಕಾಗಿ ನ್ಯೂಯಾರ್ಕ್ ನ ಜಾನ್ ಎಫ್ ಕೆನಡಿ ವಿಮಾನ ನಿಲ್ದಾಣದ ವಲಸೆ ವಿಭಾಗದ ಅಧಿಕಾರಿಗಳು ಎರಡು ತಾಸುಗಳ ಕಾಲ ವಿಚಾರಣೆ ನಡೆಸಿರುವ ಘಟನೆ ನಡೆದಿದೆ.

ಅಮೆರಿಕದಲ್ಲಿರುವ ಮಲಯಾಳಿ ಸಂಘಟನೆಯೊಂದರ ಆಹ್ವಾನದ ಮೇರೆಗೆ ಮಮ್ಮುಟ್ಟಿ ಏಪ್ರಿಲ್ 29 ರಂದು ಬ್ರಿಟಿಷ್ ಏರ್ ವೇಸ್ ವಿಮಾನದ ಮೂಲಕ ನ್ಯೂಯಾರ್ಕ್ ತಲುಪಿದರು. ವಿಮಾನ ನಿಲ್ದಾಣ ಇಳಿಯುತ್ತಿದ್ದಂತೇ ಅವರಿಗೆ ಅಲ್ಲಿ ಸಮಸ್ಯೆ ಶುರುವಾಯಿತು.

ಇದಕ್ಕೆಲ್ಲ ಕಾರಣ ಅವರ ನಿಜವಾದ ಹೆಸರು ದಾಖಲೆಗಳಲ್ಲಿ ಮಹಮದ್ ಕುಟ್ಟಿ ಇಸ್ಮಾಯಿಲ್ ಪಣಿಪರಾಂಬಿಲ ಎಂದಿರುವುದನ್ನು ನೋಡಿದ ತಕ್ಷಣ ವಲಸೆ ಅಧಿಕಾರಿಗಳಿಗೆ ಗುಮಾನಿ ಬಂದು ವಿಚಾರಣೆಗೆ ಶುರು ಹಚ್ಚಿಕೊಂಡರು. ಆಮೇಲೆ ಮಲಯಾಳಂ ಸಂಘಟನೆಯ ಸದಸ್ಯರು ವಿಷಯವನ್ನು ಭಾರತೀಯ ದೂತಾವಾಸ ಕಚೇರಿಗೆ ತಲುಪಿಸಿದರು. ಮಮ್ಮುಟ್ಟಿ ಬಗ್ಗೆ ಅನುಮಾನ ಬೇಡ, ಹಿಂದೆಯೂ ಅವರು ಸಾಕಸ್ಟು ಸಲ ಅಮೆರಿಕಕ್ಕೆ ಭೇಟಿ ಕೊಟ್ಟಿದ್ದಾರೆ. ಅವರು ದಕ್ಷಿಣ ಭಾರತದ ಜನಪ್ರಿಯ ಚಿತ್ರನಟರಲ್ಲೊಬ್ಬರು ಎಂದು ಸಮಜಾಯಿಷಿ ನೀಡಿದ ಮೇಲೆ ಅವರಿಗೆ ವಿಮೋಚನೆ ದೊರಕಿತು.

(ಏಜೆನ್ಸೀಸ್)

ಶಿಕಾರಿಯಾಗಿ ಕನ್ನಡಕ್ಕೆ ದಯಮಾಡಿದ ಮಮ್ಮೂಟಿ
ಬಾಸ್ ಚಿತ್ರದಲ್ಲಿ ಖ್ಯಾತ ತಮಿಳು ನಟ ಶಿವಾಜಿ ಪ್ರಭು

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada