ಜಾನ್ ಅಬ್ರಹಾಂ ಬಿಪ್ಸ್ ಪ್ರೇಮ ಕಹಾನಿ
ಯಾವ ಜೋಡಿ ಬೇರ್ಪಟ್ಟರೂ ಇವರಿಬ್ಬರದು ಫೆವಿಕಲ್ ಜೋಡಿ ಎಂದು ಜಾನ್ ಹಾಗೂ ಬಿಪಾಶಾ ಬಗ್ಗೆ ಬಾಲಿವುಡ್ ಮಂದಿ ಆಡಿಕೊಂಡು ನಗುತ್ತಿದ್ದ ಕಾಲ ಒಂದಿತ್ತು. ಸಲ್ಮಾನ್ ಕತ್ರೀನಾ ತಾರಾ ಜೋಡಿ ವಿರಸದ ನಂತರ ಬಾಲಿವುಡ್ ನಲ್ಲಿ ಅದೇ ಗಾಳಿ ಜಾನ್ ಬಿಪ್ಸ್ ಜೋಡಿಗೂ ತಗುಲಿ ಏಳು ವರ್ಷದ ಪ್ರೇಮ ವಿಹಾರವನ್ನು ಅಂತ್ಯಗೊಳಿಸಿದ್ದು ಹಲವರಿಗೆ ಒಂದು ಶಾಕ್ ಆಗಿತ್ತು.
ಆದರೆ, ಬಣ್ಣದ ಲೋಕದ ಮಂದಿಯ ಕಥೆಯೇ ಹಾಗೆ. ಆದರೆ, ಜಾನ್ ಬಿಪ್ಸ್ ಜೋಡಿ ಬೇರ್ಪಟ್ಟಾಗ ಇಬ್ಬರು ಪರಸ್ಪರ ನಗುಮುಖದಿಂದಲೇ ಕೈ ಕುಲುಕಿ ಬೇರೆ ದಾರಿ ಹಿಡಿದರು ಎಂಬುದು ಬಾಲಿವುಡ್ ನಲ್ಲಿ ಅರಗಿಸಿಕೊಳ್ಳಲಾಗದ ಸಂಗತಿಯಾಗಿದೆ. ಜೋಡಿಗಳು ಬದಲಾದಾಗ, ಅತ್ತು ಕರೆದು ರಂಪ ರಾಮಾಯಣ ಮಾಡುವ ಚಿತ್ರಣ ಕಾಣಸಿಗದಿದ್ದದ್ದು ಅಚ್ಚರಿಯೇ ಸರಿ.
ಒಮ್ಮೆ ಅವನು ಇನ್ನೊಮ್ಮೆ ಇವನು ಎಂದು ನಾಯಕಿಯರೇ ಮುಂದಾಗಿ ತನ್ನ ಇಷ್ಟದ ಹುಡುಗನನ್ನು ಬಟ್ಟೆ ಬದಲಿಸುವಂತೆ ಬದಲಿಸುವಾಗ, ಸುರಸುಂದರ ಜಾನ್ ಸುಮ್ಮನಿರಲು ಸಾಧ್ಯವೇ. ಜಾನ್ ಕೂಡಾ ಬಿಪ್ಸ್ ಬಿಟ್ಟ ಮೇಲೆ ಮತ್ತೊಬ್ಬ ಹುಡುಗಿಯ ಹಿಂದೆ ಬಿದ್ದಿದ್ದಾನೆ ಎಂಬ ಸುದ್ದಿಯಿದೆ. ಬಿಪ್ಸ್ ಕೂಡಾ ಇಂಟರ್ ನ್ಯಾಷನಲ್ ಸ್ಟಾರ್ ಜೋಶ್ ಹರ್ನೆಟ್ ಜೊತೆ ಓಡಾಡಿಕೊಂಡಿದ್ದಾಳೆ.
ಜಾನ್ ನ ಹೊಸ ಜಾನೆಮನ್ ಹೆಸರು ಪ್ರಿಯ, ವೃತ್ತಿಯಿಂದ ರೂಪದರ್ಶಿ. ಪ್ರಿಯ ಜೋಡಿ ಸುತ್ತುವುದು ಈಗ ಜಾನ್ ನ ದಿನಚರಿಯ ಪ್ರಮುಖ ಭಾಗವಾಗಿದೆ. ಇಬ್ಬರ ಪ್ರೇಮ ಶುರುವಾಗಿದೆ ಹೇಗೆ? ಒಂದು ಕಪ್ ಕಾಫಿ ಇಂದ. ಕಾಫಿ ಕುಡಿಯಲು ನಗರದ ಹೊರವಲಯದ ರೆಸ್ಟೋರೆಂಟ್ ಗಳನ್ನು ಹುಡುಕಿಕೊಂಡು ಈ ಜೋಡಿ ಸುತ್ತುವುದು ಬಾಲಿವುಡ್ ನಲ್ಲಿ ಸದ್ಯದ ಹಾಟ್ ಗಾಸಿಪ್.
ಇಷ್ಟಕ್ಕೂ ಕೃಷ್ಣ ಸುಂದರಿ ಬಿಪಾಶಾಳನ್ನು ಬಿಡಲು ಜಾನ್ ನಿರ್ಧರಿಸಲು ಕಾರಣ ಮದುವೆ ಪ್ರಸ್ತಾಪವಂತೆ. ವೃತ್ತಿ ಜೀವನದಲ್ಲಿ ಇನ್ನೂ ಸಾಧಿಸಬೇಕು ಎಂದು ಜಾನ್ ಹಟ ಹಿಡರೆ, ಬಿಪ್ಸ್ ಗೆ ಮದುವೆ, ಮಕ್ಕಳ ಬಗ್ಗೆ ಯೋಚಿಸಿದ್ದಳಂತೆ. ಅಂತೂ ಇಬ್ಬರು ಹೊಸ ಹಾದಿಯಲ್ಲಿ ಏನನ್ನೂ ಸಾಧಿಸಲು ಹೊರಟ್ಟಿದ್ದಾರೆ. ಬೆಸ್ಟ್ ಆಫ್ ಲಕ್.


Click it and Unblock the Notifications











