'ಡರ್ಟಿ' ಗರ್ಲ್ ವಿದ್ಯಾ ಬಾಲನ್ ಮೇಲೆ ಕ್ರಿಮಿನಲ್ ಕೇಸ್

By Rajendra

ಬಾಲಿವುಡ್ ಹಾಟ್ ತಾರೆ ವಿದ್ಯಾ ಬಾಲನ್ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಳ್ಳುವಂತೆ ಹೈದರಾಬಾದಿನ ನಾಂಪಲ್ಲಿ ಕ್ರಿಮಿನಲ್ ನ್ಯಾಯಾಲಯ ನಲ್ಲಕುಂಟ ಪೊಲೀಸರಿಗೆ ಸೂಚಿಸಿದೆ. ದಿ ಡರ್ಟಿ ಪಿಕ್ಚರ್ ಚಿತ್ರದ ಪೋಸ್ಟರ್ ಹಾಗೂ ಪ್ರೊಮೋಗಳಲ್ಲಿ ಅಸಭ್ಯವಾಗಿ ಪೋಸ್ ನೀಡಿದ್ದಾರೆ ಎಂಬ ಆರೋಪ ವಿದ್ಯಾ ಅವರ ಮೇಲಿದೆ.

ಈ ಸಂಬಂಧ ವಿದ್ಯಾ ಅವರ ಮೇಲೆ ಎಸ್ ಕೆ ಆಜಾದ್ ಎಂಬ ವಕೀಲರು ನವೆಂಬರ್ 29ರಂದು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮಹಿಳೆಯರನ್ನು ಅಸಭ್ಯವಾಗಿ ಪ್ರದರ್ಶಿಸುವುದನ್ನು ತಡೆಯುವ 1996ರ ಕಾಯಿದೆ ಸೇರಿದಂತೆ ಹಲವು ಐಪಿಸಿ ಸೆಕ್ಷನ್‌ಗಳನ್ನು ವಿದ್ಯಾ ಮೇಲೆ ಜಡಿಯಲಾಗಿತ್ತು.

ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಲಯ ವಿದ್ಯಾ ಬಾಲನ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಆದೇಶಿಸಿದೆ. "ದಿ ಡರ್ಟಿ ಪಿಕ್ಚರ್ " ಚಿತ್ರದ ಪೋಸ್ಟರ್‌ಗಳು ಸಾರ್ವಜನಿಕರ ಮನಸ್ಸನ್ನು ಕೆಡಿಸುತ್ತಿವೆ. ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿವೆ" ಎಂದು ಆಜಾದ್ ತಮ್ಮ ಅರ್ಜಿಯಲ್ಲಿ ಕೋರ್ಟ್‌ಗೆ ಒತ್ತಿ ಹೇಳಿದ್ದರು. (ಏಜೆನ್ಸೀಸ್)

More from Filmibeat

English summary
Hyderabad's Nampally criminal court ordered to the Nallakunta police to file a criminal case against Bollywood actress Vidya Balan for allegedly posing for indecent photographs on the posters and promos for her latest film – The Dirty Picture. The court was acting on a petition filed by an advocate S K Azad on November 29.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X