ದೀಪಿಕಾ, ಚಿತ್ರಾಂಗದಾ ಕೋಳಿ ಜಗಳಕ್ಕೆ ಫುಲ್ ಸ್ಟಾಪ್!
ಸಹ ನಟಿ ಚಿತ್ರಾಂಗದಾ ಜೊತೆ ತಾನು ಜಗಳ ಕಾಯುತ್ತಿಲ್ಲ ಎಂದು ನಟಿ ದೀಪಿಕಾ ಪಡುಕೋಣೆ ಹೇಳಿದ್ದಾಳೆ. ದೇಸಿ ಬಾಯ್ಸ್ ಚಿತ್ರದಲ್ಲಿ ಚಿತ್ರಾಂಗದಾ ಹಾಗೂ ದೀಪಿಕಾ ಒಟ್ಟಾಗಿ ನಟಿಸುತ್ತಿದ್ದಾರೆ. ಇಬ್ಬರಲ್ಲಿ ಆಗಾಗ ಕೋಳಿ ಜಗಳಗಳಾಗುತ್ತಿವೆ ಎಂದು ವರದಿಯಾಗಿತ್ತು. ಅದನ್ನು ನಟಿ ದೀಪಿಕಾ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.
"ಇಂತಹ ಸುದ್ದಿಗಳನ್ನು ಅದ್ಯಾರು ಹಬ್ಬಿಸುತ್ತಾರೋ! ನಾವಿಬ್ಬರು ಇರೋ ದೃಶ್ಯ ಇರೋದೇ ಒಂದು. ಆಗ ಇಬ್ಬರೂ ಹೊಂದಿಕೊಂಡು ನಟಿಸಿದ್ವಿ. ಅದು ಬಿಟ್ಟರೆ ಬೇರೆ ಯಾವ ದೃಶ್ಯವೂ ಒಟ್ಟಿಗಿಲ್ಲ. ಈ ರೀತಿಯ ಸುದ್ದಿಯಿಂದ ಬೇಸರವಾಗುತ್ತೆ" ಎಂದಿದ್ದಾರೆ ಉರಿಯುವ ದೀಪದಂತಾಗಿರುವ ದೀಪಿಕಾ ಪಡುಕೋಣೆ.
"ನಮ್ಮಿಬ್ಬರಲ್ಲಿ ಬಟ್ಟೆಯ ವಿಷಯಕ್ಕೆ ಜಗಳವಾಗಿದೆ ಎಂದು ಸುದ್ದಿ ಹಬ್ಬಿದೆ. ಇದೆಲ್ಲಾ ಸುಳ್ಳು. ನಾವಿಬ್ಬರೂ ಜಗಳವಾಡದೇ ಬಟ್ಟೆಯ ವಿಷಯವನ್ನು ಬಗೆಹರಿಸಿಕೊಳ್ಳಲು ಸಮರ್ಥರಿದ್ದೇವೆ" ಎಂದು ಚಿತ್ರಂಗದಾ ಹೇಳಿ ವಿವಾದಕ್ಕೆ ತೆರೆ ಎಳೆದಿದ್ದಾರೆ. ಜಾನ್ ಅಬ್ರಹಾಂ ಮತ್ತು ಅಕ್ಷಯ್ ಕುಮಾರ್ ಗೆ ಈ ನಟಿಮಣಿಯರು ಚಿತ್ರದಲ್ಲಿ ಸಾಥ್ ನೀಡಲಿದ್ದಾರೆ. (ಏಜೆನ್ಸೀಸ್)


Click it and Unblock the Notifications











