ಬ್ಲೂ ಫಿಲಂಗಳಲ್ಲಿ ನಟಿಸಲು ಶಾರುಖ್ ಒಲವು
ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಬ್ಲೂ ಫಿಲಂಗಳಲ್ಲಿ ನಟಿಸಲು ಒಲವು ವ್ಯಕ್ತಪಡಿಸಿದ್ದಾರೆ. ಈ ಮೂಲಕ ತಮ್ಮ ಮುಂದಿನ ಚಿತ್ರದ ಪಾತ್ರ ಯಾವ ರೀತಿ ಇರುತ್ತದೆ ಎಂಬ ಬಗ್ಗೆ ಶಾರುಖ್ ಪರೋಕ್ಷವಾಗಿ ಸುಳಿವು ನೀಡಿದಂತಾಗಿದೆ. ಕಾಮಪ್ರಚೋದಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆಸೆಯನ್ನು ಶಾರುಖ್ ತೋಡಿಕೊಂಡಿದ್ದಾರೆ.
ಕಾಮಪ್ರಚೋದಕ ಪಾತ್ರವೇ ಯಾಕಾಗಬೇಕು? ಎಂಬ ಪ್ರಶ್ನೆಗೆ, ನಾನು ಸಿಲ್ವೆಸ್ಟರ್ ಸ್ಟ್ಯಾಲೋನ್ ಅವರ ಚಿತ್ರಗಳಿಂದ ಪ್ರೇರಿತನಾಗಿದ್ದೇನೆ. ಕಾಮಪ್ರಚೋದಕ ಚಿತ್ರಗಳಲ್ಲಿ ನಟಿಸಿ ಅಮೆರಿಕಾದ ಮೇಲೆ 'ವಿಶ್ವದ ಅತಿ ದೊಡ್ಡ ಕಾಮಪ್ರಚೋದಕ ನಟ' ಎಂದು ಪತಾಕೆ ಹಾರಿಸಬೇಕೆಂದಿದ್ದೇನೆ ಎಂದು ಶಾರುಕ್ ಪ್ರತಿಕ್ರಿಯಿಸಿದ್ದಾರೆ.ಕಾಮಪ್ರಚೋದಯ ಚಿತ್ರಗಳಲ್ಲಿ ನಟಿಸಿದ ಬಳಿಕವೇ ಸ್ಟ್ಯಾಲೋನ್ ಅಮೆರಿಕಾದಲ್ಲಿ ಜನಪ್ರಿಯ ನಟನಾಗಿದ್ದು ಎಂಬುದು ಸತ್ಯ.
ಈ ಕಾರಣಕ್ಕಾಗಿ ಶಾರುಖ್ ಸಹ ಜನಪ್ರಿಯ ನಟನಾಗುವ ಉದ್ದೇಶದಿಂದ ಬ್ಲೂ ಫಿಲಂಸ್ ಗಳಲ್ಲಿ ನಟಿಸುವ ಇರಾದೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ ಇದು ಅವರ ಅಭಿಮಾನಿಗಳ ಪಾಲಿಗೆ ನುಂಗಲಾರದ ತುತ್ತಾಗಿದೆ. ಕಾಮಪ್ರಚೋದಕ ಚಿತ್ರಗಳಲ್ಲಿ ಶಾರುಖ್ ನಟಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬ ಜಿಜ್ಞಾಸೆ ಬಾಲಿವುಡ್ ವಲಯದಲ್ಲಿ ವ್ಯಕ್ತವಾಗಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











