ಅರ್ಜುನ್ ಚಿತ್ರದ ನಟಿ ಮೀರಾ ಚೋಪ್ರಾ ಮೇಲೆ ಕೊಲೆ ಕೇಸ್

By Rajendra

ರೂಪದರ್ಶಿ ಹಾಗೂ ನಟಿ ಮೀರಾ ಚೋಪ್ರಾ ಮೇಲೆ ಗುರಗಾಂವ್ ಪೊಲೀಸರು ಕೊಲೆ ಪ್ರಕರಣ ದಾಖಲಿಸಲಾಗಿದೆ. ಈಕೆ ಬಾಲಿವುಡ್ ತಾರೆ ಪ್ರಿಯಾಂಕಾ ಚೋಪ್ರಾ ಅವರ ಸೋದರ ಸಂಬಂಧಿ. ರುಚಿ ಭುಟ್ಟಾನ್ (28) ಎಂಬ ದೆಹಲಿ ಮೂಲದ ವಿವಾಹಿತ ಮಹಿಳೆ ಕೊಲೆಗೆ ಸಂಬಂಧಿಸಿದಂತೆ ಮೀರಾ ಮೇಲೆ ಕೇಸ್ ದಾಖಲಿಸಲಾಗಿದೆ.

ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ರುಚಿ ಸಂಬಂಧಿಗಳು ಅಭಿಪ್ರಾಯಪಟ್ಟಿದ್ದು, ಕೊಲೆಯ ಹಿಂದೆ ಆಕೆಯ ಪತಿ ಸುಮಿತ್ ಭುಟ್ಟಾನ್ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ವಿಚಿತ್ರ ಎಂದರೆ ಮೀರಾ ಚೋಪ್ರಾ ಜೊತೆ ಸುಮಿತ್‌ಗೆ ವಿವಾಹೇತರ ಸಂಬಂಧವಿದ್ದು, ಇವರಿಬ್ಬರ ನಡುವಿನ ಅನೈತಿಕ ಸಂಬಂಧ ರುಚಿ ಕೊಲೆಯಲ್ಲಿ ಅಂತ್ಯವಾಗಿದೆ ಎನ್ನಲಾಗಿದೆ.

ಪತಿಯ ಕಿರುಕುಳ ತಾಳಲಾರದೆ ರುಚಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ನನ್ನನ್ನು ಕೀಳಾಗಿ ಕಾಣಲಾಗುತ್ತಿತ್ತು. "ಮೀರಾ ಚೋಪ್ರಾ ಜೊತೆ ನನ್ನ ಹೋಲಿಸಿ ಸುಮಿತ್ ನನ್ನನ್ನು ಹೀಗೆಳೆಯುತ್ತಿದ್ದ" ಎಂದು ರುಚಿ ತನ್ನ ದಿನಚರಿಯಲ್ಲಿ ಬರೆದಿದ್ದಾರೆ. ರುಚಿ ಕೊಲೆಯಲ್ಲಿ ಮೀರಾ ಕೈವಾಡ ಇದೆಯೇ ಇಲ್ಲ ಎಂಬುದು ತನಿಖೆಯ ನಂತರವಷ್ಟೆ ತಿಳಿಯಲಿದೆ.

ಅಂದಹಾಗೆ ಮೀರಾ ಚೋಪ್ರಾ ಅವರು ದರ್ಶನ್ ಮುಖ್ಯಭೂಮಿಕೆಯಲ್ಲಿದ್ದ ಅರ್ಜುನ್ ಚಿತ್ರದಲ್ಲಿ ಅಭಿನಯಿಸಿದ್ದರು. ಸಂಜನಾ, ಅನಂತನಾಗ್, ಊವರ್ಶಿ, ಸುಮನ್ ಮುಂತಾದವರು ಅರ್ಜುನ್ ಚಿತ್ರದಲ್ಲಿ ತಾರಾಬಳಗದಲ್ಲಿದ್ದರು. ಈಕೆ ತೆಲುಗು ಮತ್ತು ತಮಿಳಿನ ಕೆಲವು ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. (ಏಜೆನ್ಸೀಸ್)

More from Filmibeat

English summary
Actress Meera Chopra, who is busy filming Nitin's Maaro, has been dragged into a murder case. The Gurgaon cops have started searching for her in connection with the murder of a woman, who is the wife of the actress' alleged boyfriend.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X