ಬಿಪಾಶಾ ಬಸುಗೆ ಪಕ್ಕಾ ಬಾಯ್ ಫ್ರೆಂಡ್ ಸಿಕ್ಕಿದಾನೆ
ಬಾಲಿವುಡ್ ಹಾಟ್ ಬೆಡಗಿ ಬಿಪಾಶಾ ಬಸು ಈಗ ಮೂವತ್ತು ಪ್ಲಸ್. ಜಾನ್ ಅಬ್ರಹಾಂ ಜೊತೆ ಸುದೀರ್ಘ ಡಿಂಗ್ ಡಾಂಗ್ ನಂತರ ಶಾಯಿದ್ ಕಪೂರ್ ಕಡೆಗೆ ತಿರುಗಿತ್ತು ಬಿಪಾಶಾ ಕಣ್ಣು. ನಂತರ ಬಿಪಾಶಾಗೆ ಹೊಸ ಬಾಯ್ ಫ್ರೆಂಡ್ ಸಿಕ್ಕಿದ್ದ. ಅದೂ 26 ಹರೆಯದ ಫೋರ್ಸ್ ಇರುವ ಪೋರ, ತೆಲುಗು ಹೀರೋ ರಾಣಾ.
ರಾಣಾ, ಸಖತ್ ಕಟ್ಟುಮಸ್ತ್, ಲುಕ್ ಇರುವ ಹುಡುಗ. ಆತನ ಕಿಕ್ ಬೊಂಬಾಟ್ ಆಗಿದೆ ಅಂತಾರೆ ಬಿಪಾಶಾ. 'ದಮ್ ಮಾರೋ ದಮ್' ಸಿನಿಮಾ ಶೂಟಿಂಗ್ ವೇಳೆ ಅವರಿಬ್ಬರಲ್ಲಿ ಕುಚ್ ಕುಚ್ ಹೋಗಯಾ. ಅಷ್ಟೇ ಅಲ್ಲದೇ ಬಹಳ ಸಿರೀಯಸ್ಸಾಗಿ 'ಲವ್' ಮಾಡ್ತಿದಾರೆ ಬೇರೆ. ಇದು ಪಕ್ಕಾ ಲವ್ ಅಂತಿದಾರೆ ನೋಡಿದವ್ರು.
ಪಡ್ಡೆ ಹುಡುಗರು, ಹುಡುಗಿಯರು ಮೊದಲೇ ಬಿಪಾಶಾ ಹಾಗೂ ರಾಣಾ ಹೋದಲ್ಲೆಲ್ಲಾ ಕಣ್ಣಿಡುತ್ತಾರೆ. ಅವರನ್ನು ಈ ಬಗ್ಗೆ ಕೇಳಿದರೆ ಇಬ್ಬರೂ ಉತ್ತರಿಸದೇ ಮೌನಕ್ಕೆ ಶರಣಾಗುತ್ತಾರಂತೆ. ಸುದ್ದಿಮೂಲಗಳಿಗೆ ಈ ವಿಷಯ ಗೊತ್ತಾಗದಿರಲು ಸಾಧ್ಯವೇ? ಅಷ್ಟಕ್ಕೂ 'ನಾವು, ನಮ್ಮಿಷ್ಟ' ಅಂತ ಸುತ್ತಾಡ್ತಾ ಇದಾರೆ ಬಿಪಾಶಾ-ರಾಣಾ. (ಏಜೆನ್ಸೀಸ್)
English summary
Bollywood actress Bipasha Basu got new boy friend. He is Telugu actor Rana Daggubati.


Click it and Unblock the Notifications