ಗೀತಾ ಬಾಸ್ರಾ ಜೊತೆ ಹರ್ಭಜನ್ ಸಿಂಗ್ ಒನ್ ಡೇ ಮ್ಯಾಚ್!
ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಹಾಗೂ ಬಾಲಿವುಡ್ ಬೆಡಗಿ ಗೀತಾ ಬಾಸ್ರಾ ನಡುವೆ ಹೊನಲು ಬೆಳಕಿನ ಒನ್ ಡೇ ಮ್ಯಾಚ್ ನಡೆದ ಸುದ್ದಿ ಮುಂಬೈನಿಂದ ತೇಲಿ ಬಂದಿದೆ. ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳುವ ಮುನ್ನ ತಮ್ಮ ಮಾಜಿ ಪ್ರೇಯಸಿ ಗೀತಾ ಜೊತೆ ಪಂಚತಾರಾ ಹೋಟೆಲ್ ಒಂದರಲ್ಲಿ ಭಜ್ಜಿ ಒಂದು ರಾತ್ರಿ ಕಳೆದಿದ್ದಾಗಿ ಸುದ್ದಿ.
ಕೆಲದಿನಗಳ ಹಿಂದೆ ಭಜ್ಜಿ ಪಾಲಿಗೆ ಗೀತಾ ಮಾಜಿ ಪ್ರೇಯಸಿಯಾಗಿದ್ದರು. ಈಗ ಇವರಿಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಮತ್ತೆ ಹಾಲಿ ಪ್ರೇಮಿಗಳಾಗಿದ್ದಾರೆ. ಇಬ್ಬರೂ ಯಾರಿಗೆ ಗೊತ್ತಾಗದ ಹಾಗೆ ಒಂದೇ ಕಾರಿನಲ್ಲಿ ಮುಂಬೈ ಹೊರವಲಯದಲ್ಲಿರುವ ಪಂಚತಾರಾ ಹೋಟೆಲ್‌ಗೆ ಹೋಗಿ ಅಲ್ಲಿ ಒಂದು ರಾತ್ರಿ ಕಳೆದಿದ್ದಾರೆ.
ಇವರಿಬ್ಬರನ್ನು ಕಂಡ ಛಾಯಾಗ್ರಾಹಕರೊಬ್ಬರು ಅವಾಕ್ಕಾಗಿ ತಮ್ಮ ಕ್ಯಾಮೆರಾದಲ್ಲಿ ಬಂಧಿಸಲು ಮುಂದಾದರು. ಆಗ ಗೀತಾ ತನಗೆ ಹರ್ಭಜನ್ ಪರಿಚಯವೇ ಇಲ್ಲವೇನೋ ಎಂಬಂತೆ ನಟಿಸಿದ್ದಾರೆ. ಅಷ್ಟರಲ್ಲಾಗಲೆ ಛಾಯಾಗ್ರಹಕ ಒಟ್ಟಿಗೆ ಇದ್ದ ಇಬ್ಬರನ್ನೂ ಕ್ಲಿಕ್ಕಿಸಿಯಾಗಿತ್ತು. ಕಣ್ಣೆದುರಿಗೇ ಹೀಗೆ ನಡೆದರೆ ಭಜ್ಜಿ ಸುಮ್ಮನಿರುತ್ತಾನಾ?
ಕ್ಯಾಮೆರಾದಲ್ಲಿ ಬಂಧಿಸಿದ ಛಾಯಾಗ್ರಾಹಕನನ್ನು ವಾಚಾಮ ಗೋಚರ ಬೆಂಡೆತ್ತಿ ಬ್ರೇಕು ಹಾಕಿದ್ದಾರೆ. ಅಷ್ಟರಲ್ಲಾಗಲೆ ವಿಕಿ ಲೀಕ್ಸ್ ತರಹ ಇವರಿಬ್ಬರ ನಡುವಿನ ಒನ್ ಡೇ ಮ್ಯಾಚು ಲೈವ್ ಆಗಿತ್ತು. ಕೆಲದಿನಗಳ ಹಿಂದೆ ನಾನೊಂದು ತೀರಾ ನೀನೊಂದು ತೀರಾ ಎಂದು ವಿರಹವೇದನೆಯಿಂದ ಬಳಲುತ್ತಿದ್ದ ಇವರಿಬ್ಬರು ಈಗ ಮತ್ತೆ ಒಂದಾಗಿರುವುದು ಬಾಲಿವುಡ್ ವಲಯದಲ್ಲಿ ಚಕಿತಗೊಳಿಸಿದೆ.


Click it and Unblock the Notifications











